ದರ್ಶನ್ ಗ್ಯಾಂಗ್ ಫೋನ್ ಮಾಡಿ ಧಮ್ಕಿ: ಗಂಟೆ ಗಟ್ಟಲೆ ಮಾತನಾಡಿದ್ದ ರೇಣುಕಾಸ್ವಾಮಿ ವಿಚಲಿತ
ಬೆಂಗಳೂರು, ಜೂನ್ 13: ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಬಂಧನವಾದ ಚಿತ್ರನಟ ದರ್ಶನ್ ಪ್ರಕರಣ ರಾಜ್ಯದೆಲ್ಲಡೆ ಸದ್ದು ಮಾಡುತ್ತಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮರಣದಂಡನೆ ಶಿಕ್ಷೆ ಆಗುವಂತೆ ಅನೇಕ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಕೊಲೆಗೀಡಾದ ರೇಣುಕಾಸ್ವಾಮಿಗೆ ಕರೆ ಮಾಡಿದ್ದ ಬೆದರಿಸಿದ್ದ ವಿಡಿಯೋವೊಂದು ಹರಿದಾಡುತ್ತಿದೆ. ಈ ಪ್ರಕರಣಕ್ಕೆ ದಿನಕ್ಕೊಂದು ಟ್ವೀಸ್ಟ್ ಸಿಗುತ್ತಿದೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ತಂದು ಕೊಲೆ ಮಾಡಿ ಬಿಸಾಡಲಾಗಿದೆ. ಇದಕ್ಕು ಮೊದಲೂ ಜೂನ್ 2 ರಂದು ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಸಂಪರ್ಕಿಸಿದೆ. ಮೊದಲಿಂದಲೂ ಮೃತ ವ್ಯಕ್ತಿಗೆ ಅನೇಕ ಭಾರಿ ಕರೆ ಮಾಡಿದ್ದಾರೆ.

ಕರೆ ಬಂಗಾಗಲೆಲ್ಲ ಚಿತ್ರದುರ್ಗದ ಫಾರ್ಮಸಿ ಮಳಿಗೆ ಮುಂದೆ ನಿಂತು ರೇಣುಕಾಸ್ವಾಮಿ ಮಾತನಾಡಿರುವ ವಿಡಿಯೋ ಸೆರೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಆತನ ಮಾತನಾಡಿದರು. ಈ ವೇಳೆ ದರ್ಶನ್ ಸಹಚರರ ಗ್ಯಾಂಗ್ ದೂರವಾಣಿಯಲ್ಲೇ ಬೆದರಿಸಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಮಾಡಿದ್ದರಿಂದ ನಿರಂತರವಾಗಿ ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಆತನನ್ನು ಸಂಪರ್ಕಿಸಿ ನಿರಂತರವಾಗಿ ಕರೆ ಮಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿಯವರು ವಿಚಲಿತನಾಗಿದ್ದ ಎಂದು ತಿಳಿದು ಬಂದಿದೆ.
ಜೂನ್ 2ರಂದು ಸೆರೆಯಾದ ವಿಡಿಯೋ ಇದಾಗಿ. ಅಲ್ಲಿಂತ ನಿರಂತರವಾಗಿ ಆತನನ್ನು ಸಂಪರ್ಕಿಸು ಪ್ರಯತ್ನಿಸಿದ್ದಾರೆ. ಕೊನೆಗೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಘು ದರ್ಶನ್ ಜೊತೆಗೆ ಸೇರಿ ಆತನನ್ನು ಅಪಹರಿಸಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದು, ಹಿಂಸೆ ಕೊಟ್ಟು, ನಿರಂತರ ಹಲ್ಲೆ ಮಾಡಿದ್ದಾರೆ. ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲಾಗಿದೆ. ಈ ವೇಳೆ ದರ್ಶನ್ ಮತ್ತು ಆತನ ಸಹಚರರು ಇದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿರುವ ಪೊಲೀಸರಿಗೆ ಬಗೆದಷ್ಟು ಸಾಕ್ಷ್ಯಗಳು ಹೊರ ಬರುತ್ತಿವೆ. ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿಯ ಶವ ಎಸೆಯಲು ದರ್ಶನ್ 30 ಲಕ್ಷ ರೂ. ನೀಡಿದ್ದ. ಅದಾದ ಬಳಿಕ ವೈಧ್ಯಕೀಯ ವರದಿ ಬದಲಾಯಿಸುವಂತೆ ಕೋಟಿ ಕೋಟಿ ರೂಪಾಯಿ ಹಣಕ್ಕೆ ಆಫರ್ ಮಾಡಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications