Darshan Arrest: ನೀವು ಅದೊಂದು ಕೆಲಸ ಮಾಡಿ ಬಿಡಿ ಕೋಟಿ ಕೋಟಿ ರೂ. ತೊಗೊಳ್ಳಿ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಅಗೆದಟ್ಟು ಆಳಕ್ಕೆ ಹೋಗುತ್ತಿದೆ. ಈ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್‌ರನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಇವರ ಕೈವಾಡದ ಆರೋಪ ಕೇಳಿ ಬಂದ ಹಿನ್ನೆಲೆ, ಮೈಸೂರಿನಲ್ಲಿ ಬಂಧಿಸಲಾಗಿದೆ.

ದರ್ಶನ್‌ ಪ್ರೇಯಸಿ ಪವಿತ್ರಾ ಗೌಡ್ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದರಿಂದ ದರ್ಶನ್‌ ತನ್ನ ಅಭಿಮಾನಿಗಳ ಮುಖಾಂತರ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು, ಒಂದು ಶೆಡ್ಡನಲ್ಲಿ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ ಆರೋಪವನ್ನು ದರ್ಶನ್‌ ಎದುರಿಸುತ್ತಿದ್ದಾರೆ. ಈಗ ಇನ್ನೊಂದು ಸುದ್ದಿ ಬಯಲಾಗಿದ್ದು, ಒಂದು ವೇಳೆ ಇದು ಸಹ ನಿಜವಾದಲ್ಲಿ, ದರ್ಶನ್‌ ಕೊರಳಿಗೆ ಮತ್ತಷ್ಟು ಪ್ರಕರಣಗಳು ತಳಕು ಹಾಕಿಕೊಳ್ಳುವುದು ಸ್ಪಷ್ಟ.

Actor Darshan Arrested In murder case He Illegally Obtained One Crore Rupees to Fake Report

ಮತ್ತಷ್ಟು ಪ್ರಕರಣ ತಳಕು ಹಾಕಿಕೊಳ್ಳಲು ಕಾರಣವೇನು?

ಈಗಾಗಲೇ ದರ್ಶನ್ ಅವರ ಮೇಲೆ ಹಲವು ಕೇಸ್‌ಗಳನ್ನು ಹಾಕಲಾಗಿದೆ. ಇನ್ನು ಯಾವು ಕೇಸ್‌ ಬಾಕಿ ಉಳಿದಿದೆ ಎಂಬ ಲೆಕ್ಕಾಚಾರ ನಿಮ್ಮದಾಗಿರಬಹುದು. ಟಿವಿ 9 ಕನ್ನಡ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಹಣದ ಆಮಿಷವನ್ನು ಅಧಿಕಾರಿಗಳಿಗೆ ಒಡ್ಡಲಾಗಿದೆ. ಪೊಲೀಸರ ಮುಂದೆ ತಿಳಿಸಿದಂತೆ 30 ಲಕ್ಷ ರೂ.ಗೆ ಹೆಣವನ್ನು ಬೇರೆ ಕಡೆ ಸಾಗಿಸಲು ತಿಳಿಸಲಾಗಿತ್ತು, ಮತ್ತೆದಕ್ಕೆ ಇವರು ಹಣದ ಆಮಿಷ ನೀಡಿದ್ದರು ಎಂದು ನಿಮ್ಮ ತಲೆಯಲ್ಲಿ ಹುಳ ಓಡಬಹುದು.

ಟಿವಿ 9 ಕನ್ನಡ ಸುದ್ದಿ ಸಂಸ್ಥೆ ವರದಿಯಂತೆ ರೇಣುಕಾಸ್ವಾಮಿ ಕೊಲೆ ನಂತರ, ದರ್ಶನ್‌ ಕಡೆಯಿಂದ ಪೋಸ್ಟ್‌ ಮಾರ್ಟಮ್‌ ವರದಿಯನ್ನು ತಿರುಚಿವಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿಗೆ ಹಣದ ಆಮಿಷ ಒಡ್ಡಿದ್ದರು. ಅಲ್ಲದೆ ಇದು ಹಾರ್ಟ್‌ ಅಟ್ಯಾಕ್‌ ಎಂದು ವರದಿಯಲ್ಲಿ ಉಲ್ಲೇಖಿಸಿ ಎಂದು ವೈದ್ಯರಿಗೆ ಸೂಚಿಸಲಾಗಿತ್ತು. ವರದಿಯನ್ನು ತಿರುಚಿದ್ದೇ ಆದಲ್ಲಿ ನಿಮಗೆ ಒಂದು ಕೋಟಿ ರೂಪಾಯಿಯ ಹಣವನ್ನು ನೀಡುವುದಾಗಿ ತಿಳಿಸಿದ್ದರು ಎಂದು ವರದಿ ಮಾಡಿದೆ.

Actor Darshan Arrested In murder case He Illegally Obtained One Crore Rupees to Fake Report

ಒಂದು ವೇಳೆ ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ಅವರ ಸಾವು ಸಹಜ ಸಾವು ಎಂದು ವರದಿ ಬಂದಿದ್ದರೆ, ದರ್ಶನ್‌ ಈ ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ತಪ್ಪಿಸಲಾಗಿತ್ತು ಎಂದು ಪ್ಲ್ಯಾನ್‌ ಮಾಡಿಕೊಳ್ಳಲಾಗಿತ್ತು. ಆದರೆ ಈ ಗ್ಯಾಂಗ್‌ ಮಾಡಿಕೊಂಡ ಪ್ಲ್ಯಾನ್‌ ಯಾವುದು ವರ್ಕ್‌ ಔಟ್ ಆಗಲಿಲ್ಲ. ಅಲ್ಲದೆ ಇದೇ ಸಮಯದಲ್ಲಿ ಒಬ್ಬ ಪ್ರಭಾವಿ ರಾಜಕಾರಣಿ ಸಹ ವೈದ್ಯರಿಗೆ ಕರೆ ಮಾಡಿ, ಒತ್ತಡ ಹೇರಿದ್ದ ಎಂದು ವರದಿ ಮಾಡಿದೆ. ಈ ಆಮಿಷ ಬರುತ್ತಿದ್ದಂತೆ ಎಚ್ಚೆತ್ತ ವೈದ್ಯರು ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮರೋಣತ್ತರ ಪರೀಕ್ಷೆಯಲ್ಲಿ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದ್ದು, ಅಲ್ಲದೆ ದೇಹದ 16 ಭಾಗಗಳಲ್ಲಿ ಗಾಯದ ಗುರುತಗಳಿವೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಯಾವ ದಿಕ್ಕಿನತ್ತ ಪ್ರಕರಣ ಸಾಗಿದೆ ಎಂದು ಕುತೂಹಲ ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+