ಬ್ಯಾಂಕ್ ದರೋಡೆಗೆ ವಿಫಲ ಯತ್ನ, ಗಾರ್ಡ್ ಮೇಲೆ ಹಲ್ಲೆ
ಬೆಂಗಳೂರು, ಜ. 10: ರಾಜಾಜಿನಗರದ ವೀರಶೈವ ಸಹಕಾರ ಬ್ಯಾಂಕ್‌ನಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಕಳವಿಗೆ ಯತ್ನಿಸಿದವ ಉದ್ದೇಶ ಈಡೇರದೆ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಹಲ್ಲೆಗೀಡಾಗಿರುವ ಕಾವಲುಗಾರ ಮಣಿಕಂಠನ್ (63) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮತ್ತೋರ್ವ ಸೆಕ್ಯುರಿಟಿ ಗಾರ್ಡ್ ನಾಗೇಶ್ (52) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. [ಸರಗಳ್ಳನಿಗೆ ಗುಂಡೇಟು]
ರಾಜಾಜಿನಗರದ 3ನೇ ಬ್ಲಾಕ್‌ನ 46ನೇ ಅಡ್ಡ ರಸ್ತೆಯಲ್ಲಿ ವೀರಶೈವ ಸಹಕಾರಿ ಬ್ಯಾಂಕ್ ಕಚೇರಿ ಇದೆ. ಬ್ಯಾಂಕ್ ಇದ್ದ ಕಟ್ಟಡಕ್ಕೆ ಇದ್ದವ ಒಬ್ಬನೇ ಸೆಕ್ಯೂರಿಟಿ ಗಾರ್ಡ್ ಮಣಿ. ರಾತ್ರಿ ಅವರು ಮಲಗಿದ್ದಾಗ 2.30 ಗಂಟೆ ಸಮಯದಲ್ಲಿ ಕಳ್ಳನೋರ್ವ ನಕಲಿ ಕೀಲಿ ಬಳಸಿ ಬ್ಯಾಂಕ್ ಶೆಟರ್ ತೆರೆಯಲು ಯತ್ನಿಸಿದ್ದ. ಆಗ ಉಂಟಾದ ಶಬ್ದಕ್ಕೆ ಎಚ್ಚರಗೊಂಡ ಮಣಿ ಹೊರಬಂದು ಆತನನ್ನು ಹಿಡಿಯಲು ಯತ್ನಿಸಿದರು.

ಗಾಯಗೊಂಡಿದ್ದು ಓರ್ವ, ಮೃತಪಟ್ಟಿದ್ದು ಇನ್ನೋರ್ವ : ತಕ್ಷಣ ಮಣಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ. ಆದರೆ, ಪ್ರತಿರೋಧ ಎದುರಾದಾಗ ಕಳ್ಳ ಪರಾರಿಯಾದ. ಗಲಾಟೆ ಕೇಳಿ ಪಕ್ಕದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ತುಳಸೀರಾಮ್ ಎಂಬುವರು ಓಡಿ ಬಂದರು. ತಕ್ಷಣ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿ, ಆತನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. [ಟೆಕ್ಕಿಗೆ ಚಾಕುವಿನಿಂದ ಇರಿದು ದರೋಡೆ]
ಅನಂತರ ಬ್ಯಾಂಕ್ ಬಳಿ ಮತ್ತೋರ್ವ ಸೆಕ್ಯುರಿಟಿ ಗಾರ್ಡ್ ನಾಗೇಶ ಎಂಬುವರನ್ನು ನೇಮಿಸಲಾಗಿತ್ತು. ಅವರು ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ! : ಸಾಮಾನ್ಯವಾಗಿ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳು ಭದ್ರತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತವೆ. ಸಿಸಿ ಕ್ಯಾಮರಾ ಅದರಲ್ಲಿ ಪ್ರಮುಖವಾದುದು. ಆದರೆ, ದರೋಡೆಗೆ ಯತ್ನ ನಡೆಸಿದ್ದ ವೀರಶೈವ ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. [ಶೂಟೌಟ್, 7 ಲಕ್ಷ ರು. ದರೋಡೆ]
ಇದು ಪೊಲೀಸ್ ಆಯುಕ್ತರ ಆದೇಶದ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಐಪಿಸಿ ಕಲಂ 188 ಅನ್ವಯ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಜಾಜಿನಗರದ ಪೊಲೀಸರು ತಿಳಿಸಿದ್ದಾರೆ.
{promotion-urls}
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications