ಹೈಕೋರ್ಟ್‌ ಹಿರಿಯ ವಕೀಲರಾಗಿ 11 ಮಂದಿ ನೇಮಕ

ಬೆಂಗಳೂರು, ಜು. 11: ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿಯಲ್ಲಿ ತೊಡಗಿರುವ 11 ನ್ಯಾಯವಾದಿಗಳನ್ನು ಹಿರಿಯ ವಕೀಲರನ್ನಾಗಿ ಹೈಕೋರ್ಟ್ ನೇಮಕ ಮಾಡಿದೆ. ಎರಡು ವಾರಗಳ ಹಿಂದೆ ನಾಲ್ಕು ನ್ಯಾಯವಾದಿಗಳನ್ನು ಹಿರಿಯ ವಕೀಲರನ್ನಾಗಿ ಹೈಕೋರ್ಟ್ ನೇಮಕ ಮಾಡಿತ್ತು.

ಧ್ಯಾನ್ ಚಿನ್ನಪ್ಪ ಸೇರಿದಂತೆ ಬಿಎಂ ಶ್ಯಾಂ ಪ್ರಸಾದ್‌‌, ಡಿ. ಎಲ್‌ ಜಗದೀಶ್‌‌, ಜಿ.ಕೃಷ್ಣಾ ಮೂರ್ತಿ‌, ಎಂಬಿ ನರ್‌‌ಗಂಧ್‌‌‌, ಎಂ ಎನ್‌‌ ಶೇಷಾದ್ರಿ, ಎಂವಿ ಶೇಷಾಚಲ, ಆರ್‌ ಎಲ್‌ ಪಾಟೀಲ್‌‌, ವಿ ಲಕ್ಷ್ಮೀನಾರಾಯಣ್‌, ವಿವೇಕ್‌‌ ಸುಬ್ಬಾ ರೆಡ್ಡಿ ಮತ್ತು ವೈ ಆರ್‌ ಸದಾಶಿವ ರೆಡ್ಡಿ ನೇಮಕವಾಗಿದ್ದಾರೆ ಎಂದು barandbench.com ವರದಿ ಮಾಡಿದೆ.

 high court

ಹಿರಿಯ ವಕೀಲರಾಗಿ ನೇಮಕಗೊಂಡವರಲ್ಲಿ ಅತಿ ಕಿರಿಯ ವ್ಯಕ್ತಿ ಧ್ಯಾನ್‌‌ಚಿನ್ನಪ್ಪ. 1998 ರಲ್ಲಿ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದಿಂದ ಪದವಿ ಪಡೆದ ಇವರು Dua ಅಸೋಸಿಯೇಟ್ಸ್‌ ಕಂಪೆನಿಯಲ್ಲಿ ಕೆಲಕಾಲ ಕಾರ್ಯ‌ನಿರ್ವ‌ಹಿಸಿದ್ದಾರೆ. 2003ರಲ್ಲಿ ಯುನಿವರ್ಸಿಟಿ ಲಂಡನ್‌ ಕಾಲೇಜಿನಿಂದ ಸ್ನಾತಕೊತ್ತರ ಪದವಿ‌ ಪಡೆದಿದ್ದಾರೆ.

Dua ಕಂಪೆನಿಯ ಸ್ನೇಹಿತರಾದ ಅರುಣ್‌ಕುಮಾರ್‌‌, ರವಿತೇಜ್‌ ರಾವ್‌, ಸುಂದರ್‌ ಸ್ವಾಮಿ ರಾಮದಾಸ್‌, ಮತ್ತು ಎಂವಿ ಸುಂದರಂ ಜೊತೆ ಸೇರಿ 2006ರಲ್ಲಿ ಕ್ರೆಸ್ಟ್(Crest) ಕಂಪೆನಿಯನ್ನು ಹುಟ್ಟುಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+