RSS ಸಾಧನೆ ಶೂನ್ಯ: ಶತಮಾನೋತ್ಸವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ಬೆಂಗಳೂರು, ಅಕ್ಟೋಬರ್ 02: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ, ಸಂಘದ ಸಾಧನೆ ಕುರಿತು ರಾಜ್ಯ ಆಡಳಿತ ಪಕ್ಷದ ನಾಯಕರು ಮತ್ತು ಐಟಿ ಬಿಟಿ ಸಚಿವ ಪ್ರಯಾಂಕ್ ಖರ್ಗೆ ಅವರು ಒಂದಷ್ಟು ಆರೋಪ ಮಾಡಿದ್ದಾರೆ. ಸಂಘದ ಸಾಧನೆ ಶೂನ್ಯವೆಂದು ದೂರಿದ್ದಾರೆ.

ಶತಮಾನ ಕಳೆದ ಬಳಿಕವೂ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ 'ಅತಿದೊಡ್ಡ ಸಾಧನೆ' ಎಂದು 1963ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಘಟನೆಗೆ ಒತ್ತು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭವನ್ನು ಮಹತ್ವದ ಘಟ್ಟವೆಂದು ಪ್ರಸ್ತುತಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

100 Years of RSS History Distortion Exposed Priyank Kharge Allegation

ಆದರೆ, ಇತಿಹಾಸದ ವಾಸ್ತವಾಂಶಗಳು ಬೇರೆಯದ್ದನ್ನು ಹೇಳುತ್ತವೆ. 1962ರ ಚೀನಾ-ಭಾರತ ಯುದ್ಧದ ನಂತರ, 1963ರ ಗಣರಾಜ್ಯೋತ್ಸವವನ್ನು ಸಾಮಾನ್ಯ ಸೈನಿಕ ಮೆರವಣಿಗೆ ರೂಪದಲ್ಲಿ ನಡೆಸದೆ, 'ನಾಗರಿಕರ ಪಥಸಂಚಲನ' (Citizens' March) ರೂಪದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಸಂಘಟನೆಗಳು ಮತ್ತು ಗುಂಪುಗಳು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದವು. ಆರ್‌ಎಸ್‌ಎಸ್ ಸಹ ಅವುಗಳಲ್ಲಿ ಒಂದಾಗಿದ್ದು, ಯಾವುದೇ ವಿಶೇಷ ಆಹ್ವಾನ, ಮಾನ್ಯತೆ ಅಥವಾ ಗುರುತಿನ ಚಿಹ್ನೆ ದೊರೆತಿರಲಿಲ್ಲ ಎಂದಿದ್ದಾರೆ.

ವಿಮರ್ಶಕರ ಅಭಿಪ್ರಾಯದಲ್ಲಿ, ಆರ್‌ಎಸ್‌ಎಸ್ ತನ್ನ 100 ವರ್ಷಗಳ ಇತಿಹಾಸದಲ್ಲಿ ಭಾರತದೆದುರಿಗೆ ಯಾವುದೇ ಸ್ವಾತಂತ್ರ್ಯ ಹೋರಾಟ, ಪ್ರಗತಿ ಅಥವಾ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸ್ಪಷ್ಟವಾದ ಕೊಡುಗೆಯನ್ನು ನೀಡಿಲ್ಲ. ಬದಲಿಗೆ, ಸುಳ್ಳು ಪ್ರಚಾರ ಮತ್ತು ವಕ್ರೀಕೃತ ಇತಿಹಾಸವೇ ಸಂಘದ ಮೂಲ ಪರಂಪರೆಯಾಗಿಯೇ ಉಳಿದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.

ನೆನ್ನೆ ಅಕ್ಟೋಬರ್ 01ರಂದು ಆರ್‌ಎಸ್‌ಎಸ್‌ ತನ್ ಶತಮಾನೋತ್ಸವ ಸಮಾರಂವನ್ನು ದೆಹಲಿಯಲ್ಲಿ ಆಚರಿಸಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡು ವಿಶೇಷ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಜೊತೆಗೆ ವಿಶೇಷ ಲಾಂಛನವುಳ್ಳ ಮೊದಲ ಬಾರಿಗೆ ಭಾರತಮಾತೆ ಇರುವ 100 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದರು. ಜೊತೆಗೆ ಆರ್‌ಎಸ್‌ಎಸ್ ನಡೆದು ಬಂದ ಹಾದಿ, ಸಾಧನೆ ಬಗ್ಗೆ, ದೇಶ ಮೊದಲು ಎಂದು ಹೇಳುವ ಅದರ ಧ್ಯಯದ ಬಗ್ಗೆ ಬಣ್ಣಿಸಿದ್ದರು. ಇದೀಗ ಈ ಶತಮಾನೋತ್ಸವ ಮತ್ತು ಆರ್‌ಎಸ್‌ಎಸ್‌ ಬಗ್ಗೆ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೇವಡಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+