ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿ ನಾಲ್ವರು ಸಾವು: ಮೃತರಿಗೆ ₹1 ಕೋಟಿ ಪರಿಹಾರ
ಬೆಂಗಳೂರು, ಮಾರ್ಚ್ 13: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭಮೇಳದಲ್ಲಿ ಮೌನಿ ಅಮವಾಸ್ಯೆಯಂದು ಪುಣ್ಯಸ್ನಾನಕ್ಕೆ ಯಾತ್ರಾರ್ಥಿಗಳು ತೆರಳುವಾಗು ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಬೆಳಗಾವಿ ಮೂಲಕದ ನಾಲ್ವರು ಮೃತಪಟ್ಟಿದ್ದರು. ಅವಗೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಸರ್ಕಾರ ಒಟ್ಟು ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಬೆಳಗಾವಿ ಮೂಲದ ನಾಲ್ಕವು ಯಾತ್ರಾರ್ಥಿಗಳ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸರ್ಕಾರದಿಂದ ಪರಿಹಾರ ವಿತರಣೆ ನೀಡುವುದಾಗಿ ಪ್ರಕಟಿಸಿದೆ. ತಲಾ ಒಬ್ಬರಿಗೆ ರೂಪಾಯಿ 25 ಲಕ್ಷದಂತೆ ಒಟ್ಟು 1 ಕೋಟಿ ಪರಿಹಾರ ವಿತರಣೆಗೆ ಮಾಡಲಾಗುವುದು ಎಂದು ತಿಳಿಸಿದೆ.

ಬೆಳಗಾವಿಯ ತಾಯಿ ಮಗಳು ಆದಾ ಜೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ, ಮಹಾದೇವಿ ಬಾವನೂರ ಕಾಲ್ತುಳಿತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಯುಪಿ ಸರ್ಕಾರ ನೀಡುವ ಹಣವು ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಬ್ಯಾಂಕ್ ಖಾತೆಗೆ ಶೀಘ್ರವೇ ಜಮೆ ಆಗಲಿದೆ ಎಂದು ಯುಪಿ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಹಣ ತಮ್ಮ ಖಾತೆಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರಿಂದ ಮೃತರ ಕುಟುಂಬಸ್ಥರಿಗೆ ಪರಿಹಾರ ಮೊತ್ತ ಜಮೆ ಮಾಡಲಿದ್ದಾರೆ. ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ.ಟಿ.ಜಿ.ಎಸ್ ಮೂಲಕ ಪರಿಹಾರ ಮೊತ್ತ ಜಮೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

ಪ್ರಯಾಗ್ ರಾಜ್‌ನಲ್ಲಿ ಜನವರಿ 29 ರಂದು ಮೌನಿ ಅಮವಾಸ್ಯೆ ಪ್ರಯುಕ್ತ ಪುಣ್ಯಸ್ನಾನಕ್ಕೆ ಹೋಗಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ ಇತರ ರಾಜ್ಯಗಳ ಯಾತ್ರಾರ್ಥಿಗಳು ಮಾತ್ರವಲ್ಲದೇ ಕರ್ನಾಟಕ ಬೆಳಗಾವಿಯ ಈ ನಾಲ್ವರು ಸಹ ಮೃತಪಟ್ಟಿದ್ದಾರೆ. ಪ್ರಕರಣ ಆಗಿ ಸುಮಾರು 40 ದಿನಗಳಾಗಿವೆ. ಇದೀಗ ಉತ್ತರ ಪ್ರದೇಶ ಸರ್ಕಾರ ಪರಿಹಾರ ಮೊತ್ತ ವಿತರಣೆ ಮಾಡಿದೆ. ಅದೇ ರೀತಿ ಜಿಲ್ಲಾಧಿಕಾರಿಗಳಿಗೆ ಬಂದ ಬೇಡಿಕೆ ಆಧರಿಸಿ ಕರ್ನಾಟಕ ಸರ್ಕಾರವು ಪರಿಹಾರ ನೀಡುವಂತೆ ಡಿಸಿ ಅವರಿಂದ ಸರ್ಕಾರಕ್ಕೆ ವರದಿ ರವಾನಿಸಲಾಗಿದೆ.
ಯುಪಿ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಕೃತಜ್ಞತೆ
ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ನಮ್ಮ ಬಿಜೆಪಿ ಸರ್ಕಾರ ಕುಂಭಮೇಳದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಘಟಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಯುಪಿ ಸರ್ಕಾರ ಸ್ಪಂದಿಸಿದೆ. ನಾಲ್ವರು ಮೃತಪಟ್ಟಿದ್ದರು, ತಾಲಾ 25 ಲಕ್ಷ ರೂ. ಪರಿಹಾರ ವಿತರಿಸುವ ಮೂಲಕ ತನ್ನ ಮಾನವೀಯ ಬದ್ಧತೆಯನ್ನು ಮೆರೆದಿದೆ. ಇದಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದೆ.
ರಾಜ್ಯ ಅಥವಾ ಹೊರಗಿನ ರಾಜ್ಯದವರು ಎನ್ನುವುದನ್ನು ಲೆಕ್ಕಿಸದೇ ಕುಂಭಮೇಳದಲ್ಲಿ ಭಾಗವಹಿಸಿದವರೆಲ್ಲರೂ ಈ ದೇಶದ ಸತ್ಪ್ರಜೆಗಳು ಎಂದು ಪರಿಗಣಿಸಿ ತನ್ನ ಪರಿಹಾರವನ್ನು ಘೋಷಿಸಲಾಗಿದೆ. ಆದರೆ ಕರ್ನಾಟಕ ಸರ್ಕಾರ ಈವರೆಗೂ ಇಂತಹ ಮಾನವೀಯ ನೆರವಿಗೆ ಮುಂದಾಗದಿರುವುದು ಬೇಸರದ ಸಂಗತಿ. ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡುವ ಬಜೆಟ್ ಮಂಡಿಸಿ ಮುಸ್ಲಿಂ ಓಲೈಕೆಗಾಗಿ ಯೋಜನೆಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನಾತನ ಹಿಂದೂ ಧರ್ಮದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದುರ್ಮರಣಕ್ಕೀಡಾದವರ ಬಗ್ಗೆ ಕನಿಕರ ಮೂಡದಿರುವುದು ಅವರ ಧರ್ಮಬೇದದ ಮನಸ್ಥಿತಿ ಪ್ರತಿಬಿಂಬಿಸುತ್ತದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿಗಳು ಕುಂಭಮೇಳದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರಿಹಾರವನ್ನು ಘೋಷಿಸಿ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications