ಜೂಗುಳ: ಇಡೀ ಗ್ರಾಮವನ್ನೇ ಅಪಾಯದಿಂದ ಪಾರು ಮಾಡಿ ರಿಯಲ್ ಹೀರೋ ಆದ ಪವರ್‌ ಮ್ಯಾನ್ ಆನಂದ್

ಬೆಳಗಾವಿ, ಜುಲೈ, 31: ಸಾಮಾನ್ಯವಾಗಿ ವಿದ್ಯುತ್ ಕೈಕೊಟ್ಟಾಗ ಜನರು ಇಲಾಖೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಾರೆ. ಆದರೆ, ವಿದ್ಯುತ್ ನೀಡಲು ಸಿಬ್ಬಂದಿ ಎಂತಹ ಅಪಾಯಗಳನ್ನು ಬೇಕಾದರೂ ಎದುರಿಸುತ್ತಾರೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಮಳೆ ನೀರು ನದಿಯಂತೆ ಹರಿಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲೇ ವಿದ್ಯುತ್‌ ಕಡಿತ ಮೂಲಕ ಬೆಳಗಾವಿ ಜಿಲ್ಲೆಯ ಹೆಸ್ಕಾಂನ ಪವರ್ ಮ್ಯಾನ್ ಆನಂದ್‌ ಹೆರವಾಡಿ ಸಾಹಸ ಮೆರೆದಿದ್ದಾರೆ. ಅವರ ಈ ಕಾರ್ಯವೈಖರಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

Power man Anand become a real hero by saved entire Jagula village from danger

ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದ ನದಿ ತೀರದ ಹೊಲವನ್ನು ಆವರಿಸಿದ್ದ ಪ್ರವಾಹದಲ್ಲಿ ಧುಮುಕಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಂಡ ಆನಂದ್‌ ಹೆರವಾಡಿ ಆ ಭಾಗದ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜೂಗುಳ ಗ್ರಾಮದಲ್ಲಿ ವಿದ್ಯುತ್ ಟಿಸಿ ಜಲಾವೃತಗೊಂಡಿದ್ದು, ವಿದ್ಯುತ್ ಪರಿವರ್ತಕ ಹಾಳಾಗಿ ಶಾರ್ಟ್ ಆಗುವ ಭೀತಿ ಎದುರಾಗಿತ್ತು.

ಗದ್ದೆಗಳ ಪಂಪಸೆಟ್‌ಗಳಿಗೆ ಅಳವಡಿಸಿದ್ದ ಟಿಸಿ ನೀರಿನಲ್ಲಿ ಮುಳುಗಿ, ಶಾರ್ಟ್ ಆದರೆ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು. ಅಲ್ಲದೆ, ವಿದ್ಯುತ್ ಪ್ರವಹಿಸಿ ಪ್ರಾಣಾಪಾಯ ಆಗುವ ಸಾಧ್ಯತೆಯೂ ಇತ್ತು. ಈ ಪರಿಸ್ಥಿತಿಯನ್ನು ಅರಿತ ಪವರ್ ಮ್ಯಾನ್ ಆನಂದ್‌ ಹೆರವಾಡಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನೀರಿನಲ್ಲಿ ಈಜಿ, ಟಿಸಿ ಇದ್ದ ಕಂಬವೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೆಸ್ಕಾಂನ ಪವರ್ ಮ್ಯಾನ್ ಆನಂದ್ ಹೆರವಾಡಿಯ ಈ ಕೆಲಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+