B L Santhosh: ಬಿ.ಎಲ್ ಸಂತೋಷ್ ಬಗ್ಗೆ ಜಗದೀಶ್ ಶೆಟ್ಟರ್ ಕಿಡಿ, ನಾನೇನು ಮಾತಾಡಲ್ಲ ಎಂದ ಲಕ್ಷ್ಮಣ ಸವದಿ!
ಬೆಳಗಾವಿ, ಏಪ್ರಿಲ್. 18: ಬಿಜೆಪಿಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರೇ ಸುಪ್ರೀಂ ಅಂತೆ. ಅವರು ಹೇಳಿದವರಿಗೆ ಮಾತ್ರ ಅಲ್ಲಿ ಟಿಕೆಟ್ ನೀಡುವುದು. ಅಷ್ಟೇ ಅಲ್ಲ ಅವರನ್ನು ಎದುರು ಹಾಕಿಕೊಂಡವರು ಪಕ್ಷದಲ್ಲಿ ಮೂಲೆ ಗುಂಪಾಗುವುದು ನಿಜವಂತೆ. ಇದೆಲ್ಲಾ ನಾವು ಹೇಳಿದ್ದಲ್ಲ. 20, 25, 30 ವರ್ಷ ಪಕ್ಷದಲ್ಲಿದ್ದು ಹೊರ ಬಂದವರ ಮನದಾಳದ ಮಾತು.
ಮಂಗಳವಾರವಷ್ಟೇ ಈ ಬಗ್ಗೆ ಬಾಂಬ್ ಹಾಕಿರುವ ಮಾಜಿ ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಹಿರಂಗವಾಗಿ ತಮಗೆ ಟಿಕೆಟ್ ಸಿಗದಿರಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕಾರಣ ಎಂದು ಆರೋಪಿಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

"ನನಗೆ ಕ್ಷೇತ್ರದಲ್ಲಿ ಟಿಕೆಟ್ ತಪ್ಪುವಂತೆ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್. ಅವರು ತಮ್ಮ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು ನನಗೆ ಟಿಕೆಟ್ ಸಿಗದಂತೆ ಮಾಡಿದರಿ" ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ವದಂತಿಗೆ ತುಪ್ಪ ಸುರಿದಿದೆ.
ಬಿ.ಎಲ್. ಸಂತೋಷ್ ಅವರ ಕುರಿತ ಜಗದೀಶ್ ಶೆಟ್ಟರ್ ಅವರ ಆರೋಪಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, "ಬಿ.ಎಲ್.ಸಂತೋಷ್ ಅವರ ಬಗ್ಗೆ ನಾನು ಯಾವುದೇ ಚಕಾರ ಎತ್ತಲ್ಲ. ಅವರ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಲ್ಲ, ಅದು ನನಗೆ ಇಷ್ಟ ಕೂಡ ಇಲ್ಲ" ಎಂದಿದ್ದಾರೆ.
ಬೆಳಗಾವಿಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಟಿವಿ9 ಜೊತೆ ಮಾತನಾಡಿರುವ ಅವರು, ಈ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡುವುದಿಲ್ಲ. ಬಿ.ಎಲ್.ಸಂತೋಷ್. ಅವರ ಬಗ್ಗೆ ಯಾವುದೇ ಟೀಕೆಗಳನ್ನು ಮಾಡುವುದು ನನಗೆ ಇಷ್ಟನೂ ಇಲ್ಲ ಎಂದು ಈ ವಿಷಯದ ಮಾತಿಗೆ ವಿರಾಮ ಹಾಕಿದ್ದಾರೆ. ಬಿಜೆಪಿಯಲ್ಲಿ ಹೊರೊಯರಿಗೆ ಟಿಕೆಟ್ ಕೈತಪ್ಪುವಲ್ಲಿ ಬಿ.ಎಲ್ ಸಂತೋಷ್ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡುತ್ತಿದೆ ಎಂಬ ವದಂತಿಗಳು ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿವೆ.

"ಬಿಜೆಪಿಯಲ್ಲಿ 20 ವರ್ಷ ನನ್ನ ಜೊತೆಗಿದ್ದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ನನ್ನ ಜೊತೆ ಬಂದ ಅನೇಕ ಹಿರಿಯರು, ರೈತರು ಮತ್ತು ಮೂಲ ಕಾಂಗ್ರೆಸ್ಸಿಗರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸ್ಫೂರ್ತಿ ಬಂದಿದೆ, ನಾನು ಗೆಲ್ಲುವ ಆತ್ಮವಿಶ್ವಾಸಕ್ಕೆ ಸಿಕ್ಕಿದೆ. ಇಷ್ಟು ವರ್ಷ ಜೊತೆಗಿದ್ದು, ಕಷ್ಪಟ್ಟಿ ಬೆಳೆಸಿದ ಪಕ್ಷ ಬಿಟ್ಟು ಹೋಗುವಾಗ ಸಂಕಟವಾಗುತ್ತದೆ. ತವರು ಮನೆ ಬಿಟ್ಟು ಗಂಡನ ಮನೆಗೆ ಹೋದ ಅತಂಕವಿದೆ. ಆದರೆ. ಗಂಡನ ಮನೆಯವರು ಪ್ರೀತಿಯಿಂದ ಕಾಣುತ್ತಿದ್ದಾರೆ ಅಪ್ಪಿಕೊಂಡಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬಿ.ಎಲ್ ಸಂತೋಷ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧವೂ ಜಗದೀಶ್ ಶೆಟ್ಟರ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನನ್ನು ಚಿಕ್ಕ ಬಾಲಕನಂತೆ ನಡೆಸಿಕೊಳ್ಳಲಾಯಿತು. ಏಳು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ಆದರೆ, ಮಾಜಿ ಸಿಎಂ ಆಗಿರುವ ನನ್ನನ್ನು ಒಬ್ಬ ಮಾಜಿ ಐಎಎಸ್ ಅಧಿಕಾರಿ ಎದುರು ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದರು ಎಂದು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications