Get Updates
Get notified of breaking news, exclusive insights, and must-see stories!

Belagavi: ಇಂದು ಗಾಂಧಿ ಭಾರತ ಸಮಾವೇಶ: ಪ್ರತಿಮೆ ಲೋಕಾರ್ಪಣೆ: ರಾಹುಲ್ ಗಾಂಧಿ ಗೈರು, 2 ಲಕ್ಷ ಜನ ನಿರೀಕ್ಷೆ, ಯಾರೆಲ್ಲ ಭಾಗಿ

ಬೆಳಗಾವಿ, ಜನವರಿ 21: ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ 1924 ನಡೆಸಿದ್ದ ಕಾಂಗ್ರೆಸ್ ಅಧಿವೇಶನವು ಶತಮಾನ ಪೂರೈಸಿದ್ದರ ಸ್ಮರಣಾರ್ಥ ರಾಜ್ಯ ಕಾಂಗ್ರೆಸ್‌ ಜಿಲ್ಲೆಯಲ್ಲಿ ಇಂದು ಮಂಗಳವಾರ (ಜ.21) ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. 'ಗಾಂಧಿ ಭಾರತ ಅಧಿವೇಶನ' ಹಮ್ಮಿಕೊಂಡಿದೆ. ಇಂದು ಮಧ್ಯಾಹ್ನ ನಡೆಯುವ ಈ ಕಾರ್ಯಕ್ರಮ ಸಂಬಂಧ ಬಿಗಿ ಭದ್ರತೆ ಒದಗಿಸಲಾಗಿದೆ. ದೇಶದ ನಾನಾ ಭಾಗಗಳಿಂದ ನಾಯಕರು ಆಗಮಿಸಲಿದ್ದಾರೆ. ಇದಕ್ಕೂ ಮೊದಲು ಗಾಂಧೀಜಿ ಪುತ್ಥಳಿ ಅನಾವರಣಕ್ಕಾಗಿ ಬೆಳಗಾವಿ ಸಜ್ಜುಗೊಂಡಿದೆ.

ಇಂದಿನ ಬೆಳಗಾವಿಯಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ದಂಡೇ ಹರಿದು ಬರಲಿದೆ. ಇಂದು ಗಾಂಧಿ‌ ಭಾರತ ಕಾರ್ಯಕ್ರಮ ಪ್ರಯುಕ್ತ ಬೆಳಗಾವಿ ನಗರ ಸಂಪೂರ್ಣ ಕಾಂಗ್ರೆಸ್‌ಮಯವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ರಾರಾಜೀಸುತ್ತಿವೆ ಕಾಂಗ್ರೆಸ್ ಬಾವುಟ, ಕೈ ನಾಯಕರ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.

Gandhi Bharat Conference and Gandhi Statue Unveiling in Belagavi On January 21 Today Details

ಗಾಂಧೀಜಿ, ಅಂಬೇಡ್ಕರ್ ವಿಚಾರಧಾರೆ ಮುಂದಿಟ್ಟುಕೊಂಡು ಕೈ ನಾಯಕರ ಜನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಗಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರಿಂದ ರಣಕಹಳೆ ಮೊಳಗಲಿದೆ. ಸಂವಿಧಾನ ರಕ್ಷಣೆಗಾಗಿ ದೇಶ್ಯಾದ್ಯಂತ ಹೋರಾಟಕ್ಕೆ ಬೆಳಗಾವಿಯಿಂದಲೇ ಚಾಲನೆ ನೀಡಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿ ಇರಲಿದೆ ಎನ್ನಲಾಗಿತ್ತು. ಆದರೆ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಇಂದಿನ ಬೆಳಗಾವಿ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಮೂಲಗೂ ಮಾಹಿತಿ ನೀಡಿವೆ. ಎಐಸಿಸಿ ಅಧ್ಯಕ್ಷರು ಸೇರಿದಂತೆ ಇತರ ಕೈ ನಾಯಕರು ಭಾಗಿಯಾಗುವುದು ಖಚಿತವಾಗಿದೆ.

1924 ರಲ್ಲಿ ಬೆಳಗಾವಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ಸಿಕ್ಕಿತ್ತು. ಅಂದು ಮಹಾತ್ಮಾ ಗಾಂಧಿ ಅಧ್ಯಕ್ಷತೆಯ ಮೊದಲ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಕರಿಸಿತ್ತು. ಇಂದು ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಪ್ರಯುಕ್ತ ಬಿಜೆಪಿ ವಿರುದ್ಧ ಜನಾಂದಲೋನಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.

Gandhi Bharat Conference and Gandhi Statue Unveiling in Belagavi On January 21 Today Details

ಎಐಸಿಸಿ ಅಧ್ಯಕ್ಷರಿಂದ ಗಾಂಧಿ ಪ್ರತಿಮೆ ಲೋಕಾರ್ಪಣೆ

ಸರ್ಕಾರದ ವತಿಯಿಂದ ಬೆಳಗಾವಿ ಸುವರ್ಣ ವಿಧಾನದಲ್ಲಿ ಇಂದು ಬೆಳಗ್ಗೆ 10. 30ಗಂಟೆಯಿಂದ ಸರ್ಕಾರಿ ಕಾರ್ಯಕ್ರಮ ಶುರುವಾಗಲಿದ್ದು, ಗಾಂಧೀಜಿ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾಪತಿಗಳು, ಸಚಿವರು, ಶಾಸಕರ ಸೇರಿ ಆಡಳಿತ ವಿಪಕ್ಷ ನಾಯಕರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಸಾಧಕ ರೈತರು, ಸ್ವಾತಂತ್ರ್ಯ ಹೋರಾಟಗಾರ ಜೊತೆಗೆ ಪೋಟೋ ಸಿದ್ದರಾಮಯ್ಯ ಹಾಗೂ ನಾಯಕರು ಫೋಟೋ ತೆಗೆಸಿಕೊಳ್ಳಲಿದ್ದಾರೆ. ಮಧ್ಯಾಹ್ನ ಅತಿಥಿಗಳಿಗೆ ಊಟದ ವ್ಯವಸ್ಥೆ ಇರಲಿದೆ. ಅ

ಸಮಾವೇಶಕ್ಕೆ 02 ಲಕ್ಷ ಜನ ಆಗಮನ

ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಜನ ಸಮಾವೇಶ ಆರಂಭವಾಗಲಿದೆ. ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಇಂದಿನ ಗಾಂಧಿ ಭಾರತ ಸಮಾವೇಶಕ್ಕೆ ಎರಡು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಬಿ.ಆರ್.ಅಂಬೇಡ್ಕರ್ ವಿರುದ್ಧ ಮಾತನಾಡಿದ್ದ ಬಿಜೆಪಿ ಕೇಂದ್ರ ನಾಯಕ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲಿದೆ. ಬಿಜೆಪಿ ವಿರುದ್ಧ ನಾಯಕರು ಸಮಾವೇಶದಲ್ಲಿ ವಾಗ್ದಾಳಿ ನಡೆಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+