ಮಧ್ಯಪ್ರದೇಶದಲ್ಲಿ ಮಳೆ ಬಂದರೆ ಕರ್ನಾಟಕದಲ್ಲಿ ಕೊಡೆ ಹಿಡಿಯಲ್ಲ: ಆರ್.ಅಶೋಕ್‌

ಬೆಳಗಾವಿ, ಡಿಸೆಂಬರ್ 12: ಪಂಚ ರಾಜ್ಯ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿಯೇ ತೀರುತ್ತಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಮಳೆ ಬಂದರೆ ಇಲ್ಲಿ ಕೊಡೆಯುವ ಅಗತ್ಯ ಇಲ್ಲ. ಆಪರೇಷನ್ ಕಮಲದ ಹೊರತಾಗಿಯೂ ನಾವು ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಮಹಾಘಟಬಂಧನ್‌ಗೆ ತೆಲಂಗಾಣದಲ್ಲಿ ಸೋಲಾಗಿದೆ. ನರೇಂದ್ರ ಮೋದಿ ಅವರ ಸರಿಸಮಾನಾಗಬಲ್ಲ ಯಾವ ನಾಯಕನೂ ಮಹಾಘಟಬಂಧನ್‌ನಲ್ಲಿ ಇಲ್ಲ, ಮೋದಿ ಅವರು 2019ರಲ್ಲಿ ಮತ್ತೆ ಪ್ರಧಾನಿ ಆಗುವುದು ಖಾಯಂ ಎಂದು ಅವರು ಹೇಳಿದರು.

Five state election result wont effect on Karnataka politics: R.Ashok

ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದ ಕಾರಣ ಬಿಜೆಪಿಗೆ ಸೋಲಾಗಿದೆ ಇದು ಕಾಂಗ್ರೆಸ್‌ನ ಗೆಲುವಲ್ಲ. ಈ ಫಲಿತಾಂಶದಿಂದ ನಾಯಕರು ಬೀಗುವಂತಿಲ್ಲ ಎಂದು ಅವರು ಹೇಳಿದರು.

ವಿಧಾನಪರಿಷತ್‌ ಸಭಾಪತಿ ಸ್ಥಾನ ಉತ್ತರ ಕರ್ನಾಟಕದ ಬಸವರಾಜ್ ಹೊರಟ್ಟಿ ಅವರಿಗೆ ಸಿಗದೇ ಇರುವುದು ಬೇಸರ ತಂದಿದೆ. ವಿಧಾನಪರಿಷತ್‌ನಲ್ಲೂ ಹಿರಿಯ ಸದಸ್ಯರಾಗಿರುವ ಅವರಿಗೆ ಸಭಾಪತಿ ಸ್ಥಾನ ನೀಡಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಮ್ಮತವಿಲ್ಲ ಎಂಬುದನ್ನು ಇಂದಿನ ಸಭಾಪತಿ ಆಯ್ಕೆ ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+