ಬೆಳಗಾವಿಯಲ್ಲಿ 'ಖಡ್ಗದ ಜತೆ ಪ್ಯಾಲೆಸ್ತೀನ್ ಮಾದರಿ'ಯ ಪೆಂಡಾಲ್ ಹಾಕಿದ್ದ ಮುಸ್ಲಿಂ ಯುವಕರು!
ಬೆಳಗಾವಿ, ಸೆಪ್ಟಂಬರ್ 22: ಇತ್ತೀಚೆಗಷ್ಟೆ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ನ್ಯಾಷನಲ್ ಹೈವೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಬೈಕಿಗೆ ಕಟ್ಟಿಕೊಂಡು ಓಡಾಡಿದ ಘಟನೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದು ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಇಲ್ಲಿನ ಮುಸ್ಲಿಂ ಯುವಕರು ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್ ಅಳವಡಿಸಿದ್ದು, ಇದೀಗ ಮತ್ತೆ ವಿವಾದದ ಬೆಂಕಿ ಹೊತ್ತಿಸಿದೆ.
ನಾಳೆ ಸೋಮವಾರ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ 'ಈದ್ ಮಿಲಾದ್' ಇದೆ. ಇದಕ್ಕು ಒಂದು ದಿನ ಮುನ್ನವೇ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್ ಹಾಕುವ ಮೂಲಕ ಬೆಳಗಾವಿಗೂ ಪ್ಯಾಲೆಸ್ತೀನ್ ಧ್ವಜ ವಿವಾದ ಹಬ್ಬಿತೇ ಎಂದು ಭಾಸವಾಗುತ್ತದೆ.

ಮುಸ್ಲಿಂ ಯುವಕರು ಹಾಕಿದ್ದ ಈ ಪೆಂಡಾಲ್ ಎದುರು ಪ್ಯಾಲೆಸ್ತೀನ್ ಧ್ವಜದಲ್ಲಿ ಖಡ್ಗದ ಮಾದರಿಯನ್ನು ಕಿಡಿಗೇಡಿಗಳು ಕಟ್ಟಿದ್ಚದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದ್ದಾರೆ. ಅಲ್ಲದೇ ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಹಿತಕರ ಘಟನೆಗೂ ಮುನ್ನ ಎಚ್ಚೆತ್ತ ಪೊಲೀಸರು
ನಾಳೆ ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ಮೆರವಣಿಗೆ ಇರಲಿದೆ. ಈ ಹಿನ್ನೆಲೆ ಈ ರೀತಿ ಪೆಂಡಾಲ್ ಹಾಕಿರುವುದು ಗೊತ್ತಾಗಿದೆ. ಇದಕ್ಕೆ ಸ್ಥಳೀಯರಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಆದಾಗ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂ ಟಾಗುತ್ತದೆ. ಈ ಬಾರಿ ಬೆಳಗಾವಿ ಪೊಲೀಸರ ತ್ವರಿತ ಕಾರ್ಯದಿಂದಾಗಿ ಯಾವುದೇ ವಿವಾದ, ಅಹಿತ ಕರ ಘಟನೆ ಆಗಿದಂತೆ ಪೂರ್ವದಲ್ಲಿಯೇ ಸ್ಥಳಕ್ಕೆ ತೆರಳಿ ಪೆಂಡಾಲ್, ಖಡ್ಗ ತೆರವು ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಚಿಕ್ಕಮಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಸ್ಲಿಂ ಕಿಡಿಗೇಡಿ ಯುವಕರು ಪ್ಯಾಲೆಸ್ತೀನ್ ಧ್ವಜ ಕಟ್ಟಿಕೊಂಡು ಓಡಾಡಿದ್ದರು. ಇದರ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೇಶದಲ್ಲಿ ಇಂತಹ ನಡವಳಿಗೆ ಖಂಡನೀಯ, ಈ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.
ಕ್ರಮ ಕೈಗೊಳ್ಳದ ಪೊಲೀಸರು
ಆದರೆ ಪ್ರಕರಣ ರಾಜ್ಯಮಟ್ಟದಲ್ಲಿ ಸದ್ದು ಮಾಡಿದರೂ ಸಹಿತ ಸ್ಥಳೀಯ ಸಂಬಂಧಿಸಿದ ಠಾಣೆಯ ಪೊಲೀಸರು ತಪ್ಪಿತಸ್ಥರ ಐವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಎಫ್‌ಐಆರ್ ದಾಖಲಿಸದೇ ನೆಪ ಮಾತ್ರಕ್ಕೆ ಇಬ್ಬರನ್ನು ಕರೆದು ವಿಚಾರಣೆ ನಡೆಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮಂಡ್ಯದ ನಾಗಮಂಗಲ ಕೋಮು ಗಲಭೆ ಬೆನ್ನಲ್ಲೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಕಟ್ಟಿ ಪುಂಡರು ಓಡಾಡಿದ್ದರು. ಇದೀಗ ಬೆಳಗಾವಿಯಲ್ಲಿ ಇಂತಹದ್ದೆ ಬೆಳವಣಿಗೆ ನಡೆದಿದೆ. ಇಂತವರ ವಿರುದ್ಧ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳದೇ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.












Click it and Unblock the Notifications