ನರೇಂದ್ರ ಮೋದಿ ಆಧುನಿಕ ಹಿಟ್ಲರ್ : ದಿಗ್ವಿಜಯ್

ಇಂದೋರ್, ಆ.23: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ನೀಡದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಇದ್ದರೂ ಕಾಂಗ್ರೆಸ್ ಮುಖಂಡರ ಬಾಯಿ ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ. ಮೋದಿ ಅವರನ್ನು ಮತ್ತೊಮ್ಮೆ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆಧುನಿಕ ಹಿಟ್ಲರ್, ಹಿಟ್ಲರ್ ಅನುಸರಿಸಿದ ತಂತ್ರವನ್ನು ಬಳಸಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಾರೆ ಎಂದಿದ್ದಾರೆ.

"ನನಗನ್ನಿಸುವ ಮಟ್ಟಿಗೆ ಹಿಟ್ಲರ್ ಹಾಗೂ ಮೋದಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಹಿಟ್ಲರ್ ಹೇಗೆ ಜನರನ್ನು ಹಿಂಸಿಸಿ ಅಧಿಕಾರವನ್ನು ಅನುಭವಿಸಿದನೋ ಅದೇ ರೀತಿ ಮೋದಿ ಕೂಡಾ ಜನರನ್ನು ಮರಳು ಮಾಡಿ ಸುಳ್ಳು ಅಭಿವೃದ್ಧಿ ಮಂತ್ರ ಜಪಿಸುವಂತೆ ಮಾಡಿ ಅಧಿಕಾರ ಉಳಿಸಿಕೊಂಡಿದ್ದಾರೆ. ಗುಜರಾತ್ ಜನ ಮೋದಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ವಿಷಾದ ವ್ಯಕ್ತಪಡಿಸಿದರು.

Narendra 'Hitler' Modi, says Digvijay Singh

ಮೋದಿಯಿಂದಾಗಿ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತಿದೆ.ಮುಂದೆ ಬಿಜೆಪಿ ಮೋದಿಮಯವಾಗಲಿದೆ.ಜನರು ಬಿಜೆಪಿಯನ್ನು ಮರೆಯಲಿದ್ದಾರೆ ಎಂದು ದಿಗ್ವಿಜಯ್ ಎಚ್ಚರಿಸಿದ್ದಾರೆ.

ಮಧ್ಯಪ್ರದೇಶ, ಛತ್ತೀಸ್ ಗಢದಂಥ ಬಿಜೆಪಿ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಅಲೆ ಏಳಲಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಚೌಹಾಣ್, ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ಜನಪ್ರಿಯತೆ ಕಳೆದುಕೊಳ್ಳಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+