ಏಷ್ಯನ್ ಬಾಕ್ಸಿಂಗ್ ಚಿನ್ನ ಗೆದ್ದ ಶಿವ, ಇನ್ನಷ್ಟು ಚಿತ್ರಗಳು
ಬೆಂಗಳೂರು, ಜು.9: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಬಾಕ್ಸರ್ ಶಿವ ಥಾಪ(56 ಕೆಜಿ) ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಥಾಪ ಅಂತಾರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಬಂಗಾರದ ಪದಕ ಗೆದ್ದ ದೇಶದ ಮೊದಲ ಕಿರಿಯ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಥಾಪಾ ಗೆದ್ದ ಚಿನ್ನದ ಪದಕವಲ್ಲದೆ ಭಾರತಕ್ಕೆ ಒಟ್ಟಾರೆ ಎರಡು ಬೆಳ್ಳಿ ಹಾಗೂ 1 ಕಂಚಿನ ಪದಕ ಬಂದಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 19ರ ಹರೆಯದ ಅಸ್ಸಾಂನ ಬಾಕ್ಸರ್ ಥಾಪ ಜೋರ್ಡನ್ನಿನ ಸ್ಥಳೀಯ ಬಾಕ್ಸರ್ ಒಬಾಡ ಅಲ್ಕಾಬೆಹ್ ರನ್ನು 2-1 ಅಂತರದಿಂದ ಮಣಿಸಿದರು.
ಕಾಶ್ಮೀರದ ರೈಲು: ಖ್ವಾಜಿಗಂಡ್ ನಲ್ಲಿ ಪ್ರಯಾಣಿಕರು ರೈಲಿನ ಮೇಲ್ಛಾವಣಿ ಮೇಲೆ ಹತ್ತಿ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಉದ್ಘಾಟನೆಗೊಂಡ 11 ಕಿ.ಮೀ ಸುರಂಗ ಮಾರ್ಗದಲ್ಲಿ ಬನ್ನಿಹಾಲ್ ನಿಂದ ಖ್ವಾಜಿಗಂಡ್ ಗೆ ರೈಲು ಚಲಿಸಲಿದೆ.
ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ನ ಮತ್ತೊಂದು ಚಿತ್ರ, ಬೋಧ್ ಗಯಾದಲ್ಲಿ ಶಾಂತಿ ದೂತರ ಪ್ರಾರ್ಥನೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿದೆ.

ಏಷ್ಯನ್ ಬಾಕ್ಸಿಂಗ್ ಚಿನ್ನ ಗೆದ್ದ ಶಿವ
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಬಾಕ್ಸರ್ ಶಿವ ಥಾಪ(56 ಕೆಜಿ) ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಕಾಶ್ಮೀರದ ರೈಲು
11 ಕಿ.ಮೀ ಸುರಂಗ ಮಾರ್ಗದಲ್ಲಿ ಬನ್ನಿಹಾಲ್ ನಿಂದ ಖ್ವಾಜಿಗಂಡ್ ಗೆ ರೈಲು ಚಲಿಸಲಿದೆ.

ಧೋನಿ ಮುಖಕ್ಕೆ ಕೇಕ್
ಇದು ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಮುಖಕ್ಕೆ ಕೇಕ್ ಮೆತ್ತಿದ್ದಲ್ಲವಂತೆ. ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಮುಖಕ್ಕೆ ಕೇಕ್ ಥೆರಪಿ ನೀಡಲಾಗಿತ್ತು ಎಂದು ಸುದ್ದಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಚಿತ್ರ ಜನಪ್ರಿಯತೆ ಗಳಿಸಿದೆ.

ಮಳೆಯಲಿ ಜೊತೆಯಲಿ
ನಾಗಾಂವ್: ರಾಸುಗಳ ಜೊತೆ ಹುಡುಗರು ಪ್ರವಾಹದ ನೀರಿನಲ್ಲಿ ನಡೆಯುತ್ತಿದ್ದಾರೆ.

ಆಗ್ರಾದ ಪ್ರೇಮಸೌಧ
ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ಸೋಮವಾರ ಕಂಡ ಚಿತ್ರ

ದುರಂತ ಸಾವನ್ನಪ್ಪಿದ ಆನೆ
ನಾಗಾಂವ್: ಜಖಾಲಾಬಾಂಧ ಸಮೀಪ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ ಆನೆ

ಪ್ರಾರ್ಥನೆ
ಬೋಧ್ ಗಯಾ : ಪ್ರಾರ್ಥನೆ ಸಲ್ಲಿಸುತ್ತಿರುವ ಬೌದ್ಧ ಭಿಕ್ಷು

ಸ್ವಚ್ಛತಾ ಕಾರ್ಯ
ಬೋಧ್ ಗಯಾ ದೇಗುಲದಲ್ಲಿ ಸ್ವಚ್ಛತಾ ಕಾರ್ಯ












Click it and Unblock the Notifications