ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಮಾಡಿದ್ದು ಹೇಗೆ?
ನವದೆಹಲಿ, ಮೇ.16: ಐಪಿಎಲ್ 2013 ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದ್ದು, ರಾಜಸ್ಥಾನ ರಾಯಲ್ಸ್ ತಂಡ ಶ್ರೀಶಾಂತ್ ಸೇರಿ ಇಬ್ಬರು ಆಟಗಾರರನ್ನು ಬಂಧಿಸಿರುವುದನ್ನು ದೆಹಲಿ ಪೊಲೀಸ್ ವರಿಷ್ಠ ನೀರಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕ್ರೀಡಾಲೋಕವನ್ನು ಬೆಚ್ಚಿಬೀಳಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಬಗ್ಗೆ ವಿವರಣೆ ದೆಹಲಿ ಪೊಲೀಸ್ ವರಿಷ್ಠ ನೀರಜ್ ಕುಮಾರ್ ಗುರುವಾರ(ಮೇ.16) ಸುದ್ದಿಗೋಷ್ಠಿ ನಡೆಸಿ ತಮ್ಮ ಬಳಿ ಇದ್ದ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದರು.ಇದರ ಜೊತೆಗೆ ಆಟಗಾರರು ಬಳಸುತ್ತಿದ್ದ ಗುಪ್ತ ಪದ, ಬುಕ್ಕಿಗಳಿಗೆ ನೀಡುತ್ತಿದ್ದ ಸಂದೇಶದ ಬಗ್ಗೆ ವಿವರಿಸಿದರು

ಸುದ್ದಿಗೋಷ್ಠಿ ವಿವರ ಇಲ್ಲಿದೆ:
ಸಮಯ 3.55: ಶ್ರೀಶಾಂತ್ ಲೀಡರ್?
* ಕೇರಳ ಮೂಲದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಎಸ್ ಶ್ರೀಶಾಂತ್ ಅವರು ಈ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ. ಆದರೆ, ಅವರನ್ನು ಈ ಸಮಯಕ್ಕೆ ಫಿಕ್ಸಿಂಗ್ ಜಾಲದ ಲೀಡರ್ ಎನ್ನಲು ಬರುವುದಿಲ್ಲ.
* ಆಟಗಾರರಿಗೆ ದುಬೈನಿಂದ ಕರೆ ಬಂದಿರುವುದು, ಡಾಲರ್ ಗಳಲ್ಲಿ ಹಣ ಸಂದಾಯ ವ್ಯವಹಾರ ನಡೆದಿರುವುದು ನಿಜ. ಹೀಗಾಗಿ ಇಡೀ ಬೆಟ್ಟಿಂಗ್ ಜಾಲದ ರುವಾರಿ ವಿದೇಶದಲ್ಲಿ ಕೂತು ಇಲ್ಲಿ ಆಟವಾಡಿಸುತ್ತಿದ್ದಾನೆ ಎನ್ನಬಹುದು ಎಂದು ನೀರಜ್ ಹೇಳಿದರು.
ಸಮಯ 3.45 : ಧೋನಿ ಫಿಕ್ಸರ್ ? ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಥವಾ ತಂಡದ ಮಾಲೀಕರು ಬುಕ್ಕಿಗಳ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷಿಗಳಿಲ್ಲ.
* ಪೊಲೀಸರಿಗೆ ಬುಕ್ಕಿಂಗ್ ಬೆಟ್ಟಿಂಗ್ ಜಾಲದ ಬಗ್ಗೆ ಮಾಹಿತಿ ಇತ್ತು. ಆದರೆ, ಯಾವ ಆಟಗಾರರು ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗಿದ್ದಾರೆ ಎಂಬುದು ತಿಳಿಯಲು ಕೆಲ ತಿಂಗಳುಗಳ ಶ್ರಮವಹಿಸಬೇಕಾಯಿತು.
* ಕಳೆದ ರಾತ್ರಿ ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯ ಕೂಡಾ ಫಿಕ್ಸ್ ಆಗಿತ್ತು. ಅಂಕಿತ್ ಚೌವ್ಹಾಣ್ ಎರಡನೇ ಓವರ್ ನಲ್ಲಿ 13 ರನ್ ನೀಡಲು ಸೂಚನೆ ಸಿಕ್ಕಿತ್ತು.
* ಮೊದಲ ಓವರ್ ನಲ್ಲಿ ಕೇವಲ 2 ರನ್ ನೀಡಿದ್ದ ಅಂಕಿತ್, ಎರಡನೇ ಓವರ್ ನಲ್ಲಿ ಪೂರ್ವ ನಿಗದಿಯಂತೆ 12 ರನ್ ಚೆಚ್ಚಿಸಿಕೊಂಡರು. ಇದಕ್ಕೆ ಅಂಕಿತ್ ಗೆ 60 ಲಕ್ಷ ರು ಆಫರ್ ಸಿಕ್ಕಿದೆ ಎಂದು ದೆಹಲಿ ಪೊಲೀಸರು ಹೇಳಿದರು.
ಸಮಯ 3.30: ಬುಕ್ಕಿಗಳಿಗೆ ಪರಿಚಯವಾಗಿದ್ದು ಹೇಗೆ?
* ಶ್ರೀಶಾಂತ್ ಕಸಿನ್ ಜಿಜು ಜನಾರ್ಧನ್ ಸ್ವತಃ ಬುಕ್ಕಿಯಾಗಿದ್ದು, ದೊಡ್ಡ ಜಾಲಕ್ಕೆ ಎಲ್ಲರನ್ನು ಪರಿಚಯಿಸಿದ್ದಾನೆ. ಶ್ರೀಶಾಂತ್ ಗೆ ಒಂದು ಓವರ್ ಗೆ 40 ಲಕ್ಷ ರು ನಂತೆ ಹಣ ಸಂದಾಯವಾಗಿದೆ.
* ರಾಜಸ್ಥಾನ್ ರಾಯಲ್ಸ್ ತಂಡದ ಇತರೆ ಯಾವ ಆಟಗಾರರಾಗಲಿ, ಐಪಿಎಲ್ ನ ಇತರೆ ತಂಡದ ಕ್ರಿಕೆಟರ್ಸ್ ಕಳ್ಳಾಟದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಮೂವರು ಆಟಗಾರರು ಮಾತ್ರ ಆರೋಪಿಗಳಾಗಿದ್ದಾರೆ.
* ಐಪಿಎಲ್ ಟೂರ್ನಿ ನಡೆಸುತ್ತಿರುವ ಬಿಸಿಸಿಐ ಅಧಿಕಾರಿಗಳ ತಂಡ, ಮ್ಯಾನೇಜರ್ ಗಳ ಬಗ್ಗೆ ಕೂಡಾ ಸಂಶಯವಿತ್ತು ಆದರೆ, ಯಾರೊಬ್ಬರೂ ಆರೋಪಿಗಳಾಗಿ ಗುರುತಿಸಿಕೊಂಡಿಲ್ಲ.
* ಶೇನ್ ಟೈಟ್ ಸೇರಿದಂತೆ ಈ ಬಾರಿ ಆಡುತ್ತಿರುವ ಯಾವ ವಿದೇಶಿ ಆಟಗಾರರು ಕಳ್ಳಾಟದಲ್ಲಿ ಭಾಗಿಯಾಗಿಲ್ಲ
ಸಮಯ 3.15: ಮೇ.9 ರಂದು ನಡೆದ ಕಿಂಗ್ಸ್ XI ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ನೋಡಿದ ಮೇಲೆ ಎರಡನೇ ಬಾರಿಗೆ ಡೌಟ್ ಬಂತು.
* ಆ ಪಂದ್ಯದಲ್ಲಿ ಶ್ರೀಶಾಂತ್ ಅವರು ತಮ್ಮ ಪ್ಯಾಂಟ್ ಹಿಂಬದಿಯಲ್ಲಿ ಸಣ್ಣ ಟವೆಲ್ ಸಿಕ್ಕಿಸಿಕೊಂಡರು. ಇದು ಬುಕ್ಕಿಗಳಿಗೆ ನೀಡಿದ ಸಂಕೇತವಾಗಿತ್ತು. ಈ ಮೂಲಕ ಈ ಓವರ್ ನಲ್ಲಿ ಪೂರ್ವನಿಗದಿಯಂತೆ ರನ್ ನೀಡುತ್ತೇನೆ ಎಂದು ಸಂದೇಶ ರವಾನಿಸಿದ್ದರು.
* ಪೂರ್ವ ನಿಗದಿತ ಫಿಕ್ಸ್ ಆಗದ ಓವರ್ ಎಂದು ಸೂಚಿಸಲು ಮುಂದಿನ ಓವರ್ ನಲ್ಲಿ ಟವೆಲ್ ತೆಗೆದು ಜೇಬಿನಲ್ಲಿರಿಸಿಕೊಂಡರು. ಆ ಓವರ್ ಮೇಲೆ ಯಾವುದೇ ಬುಕ್ಕಿಂಗ್ ನಡೆಯಲಿಲ್ಲ ಎಂದರ್ಥ.
ಸಮಯ 3.00: ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಜೊತೆಗೆ 7 ಜನ ಬುಕ್ಕಿಗಳು ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಮೊಬೈಲ್ ಫೋನ್ ಅಪ್ಲಿಕೇಷನ್ ಬಳಸಿ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು.
* ಶ್ರೀಶಾಂತ್ ಅವರ ಕಸಿನ್ ಜಿಜು ಪೊಕ್ಕಾನ್ ಜನಾರ್ದನ್ ಬುಕ್ಕಿಯಾಗಿದ್ದು ವಿವಿಧ ಬೆಟ್ಟಿಂಗ್ ಜಾಲಕ್ಕೆ ಆಟಗಾರರಿಗೆ ಆತನೇ ಪರಿಚಯಿಸಿದ್ದ.
* ಪ್ರತಿ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ನಿಗದಿತ ಓವರ್ ನಲ್ಲಿ ಇಂತಿಷ್ಟು ರನ್ ನೀಡಬೇಕೆಂದು ಪೂರ್ವ ಒಪ್ಪಂದವಾಗಿತ್ತು.
* ಯಾವ ಓವರ್ ಫಿಕ್ಸ್ ಆಗಿದೆ ಎಂದು ಬುಕ್ಕಿಗಳಿಗೆ ತಿಳಿಸಲು ಕೆಲವು ಹಾವ ಭಾವಗಳನ್ನು ಆಟಗಾರರು ಬಳಸುವಂತೆ ಸೂಚಿಸಲಾಗಿತ್ತು.
* ಆಟಗಾರರು ವಾಚ್ ತಿರುಗಿಸುವುದು, ಕೈವಸ್ತ್ರ ಬದಲಿಸುವುದು, ಅಂಗಿ ಬದಲಾಯಿಸುವುದು..ತಂಪು ಕನ್ನಡಕ ಬದಲಾವಣೆ..ಜೇಬಿನಿಂದ ಲಾಕೆಟ್ ತೆಗೆಯುವುದು..ಇತ್ಯಾದಿ
* ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ಹಾಗೂ ಪುಣೆ ವಾರಿಯರ್ಸ್ ಪಂದ್ಯದಲ್ಲಿ ಈ ರೀತಿ ಗುಪ್ತ ಸಂಕೇತಗಳ ರವಾನೆ ಬಗ್ಗೆ ಸಂಶಯ ಕಂಡು ಬಂದಿತ್ತು.
* ಆದರೆ, ಚಂಡಿಲಾ ಆ ಪಂದ್ಯದಲ್ಲಿ 2 ಓವರ್ ನಲ್ಲಿ 14 ರನ್ ಮಾತ್ರ ನೀಡಿದ್ದರು. ಬುಕ್ಕಿಗಳಿಗೆ ಸಿಗ್ನಲ್ ನೀಡಲು ಮರೆತಿದ್ದರು. ಹೀಗಾಗಿ ಬುಕ್ಕಿಗಳು ಭಾರಿ ನಷ್ಟ ಅನುಭವಿಸಿದ್ದರು.
* ಕೋಪಗೊಂಡ ಬುಕ್ಕಿಗಳು ಪ್ರತಿ ಓವರ್ ಗೆ 20 ಲಕ್ಷ ರು ನಂತೆ ಹಣ ವಾಪಸ್ ಮಾಡುವಂತೆ ಚಂಡಿಲ ಹಿಂದೆ ಬಿದ್ದಿದ್ದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications