ಸಹಾಯಕಿ ಜತೆ ಸಂಬಂಧ: ಯಲಹಂಕ ವೈದ್ಯನ ಹತ್ಯೆ

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ಚಿಕ್ಕಬೊಮ್ಮಸಂದ್ರ ನಿವಾಸಿ ಡಾ. ಪುರುಷೋತ್ತಮ್ (54) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿರುವ ಆರೋಪಿ ಶಂಕರನನ್ನು ಬಂಧಿಸಲಾಗಿದೆ. ಡಾ. ಪುರುಷೋತ್ತಮ್ ಅಟ್ಟೂರು ಲೇ ಔಟಿನಲ್ಲಿ ಶ್ರೀ ಮಂಜುನಾಥೇಶ್ವರ ಕ್ಲಿನಿಕ್ ನಡೆಸುತ್ತಿದ್ದರು.
ಏನಾಯಿತೆಂದರೆ ಹತ್ಯೆ ಆರೋಪಿ ಶಂಕರ್ ಗೆ ಸೇರಿದ ಕಟ್ಟಡದಲ್ಲಿ ಡಾ. ಪುರುಷೋತ್ತಮ್ ಕಳೆದ 15 ವರ್ಷಗಳಿಂದ ಕ್ಲಿನಿಕ್ ಇಟ್ಟುಕೊಂಡಿದ್ದರು. ಇದೇ ಕ್ಲಿನಿಕ್ ನಲ್ಲಿ ಶಂಕರ್ ಪತ್ನಿ ಕಾಂತಾ ಸಹ 7 ವರ್ಷಗಳಿಂದ ವೈದ್ಯ ಪುರುಷೋತ್ತಮನಿಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗೆ ಈ ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು.
ಈ ಕಹಿಸತ್ಯ ತಿಳಿದಿದ್ದೇ ಕುಪಿತಗೊಂಡ ಶಂಕರ್ ಗುರುವಾರ ರಾತ್ರಿ ಕ್ಲಿನಿಕ್ ಬಾಗಿಲು ಮುಚ್ಚಿ ಹೊರಬರುತ್ತಿದ್ದ ಪುರುಷೋತ್ತಮ್ ಮೇಲೆ ದಾಳಿ ನಡೆಸಿದ್ದಾನೆ. ಚಾಕುವಿನಿಂದ ಆತನ ಹೊಟ್ಟೆ ಮತ್ತು ಎದೆಗೆ ತಿವಿದಿದ್ದಾನೆ. ಪುರುಷೋತ್ತಮ್ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
54 ವರ್ಷದ ಪುರುಷೋತ್ತಮ್ ಮೂಲತಃ ಮೈಸೂರಿನವ. ಚಿಕ್ಕಬೊಮ್ಮಸಂದ್ರ ಎ ಸೆಕ್ಟರಿನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು.












Click it and Unblock the Notifications