ಕಾವೇರಿಗಾಗಿ ಮತ್ತೆ ಕ್ಯಾತೆ ತೆಗೆದ ಜಯಾ ಮೇಡಂ

ತಮಿಳುನಾಡಿನಲ್ಲಿ ನೀರಿನ ಕೊರತೆ ಆಗಿರುವುದರಿಂದ ಬೆಳೆಗಳು ಒಣಗುತ್ತಿದೆ. 14 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಬೇಕಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಎಂದು ತಮಿಳುನಾಡು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಪೂರಕ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.
ಡಿಸೆಂಬರ್ 7ರಂದು ಸೇರಿದ್ದ ಕಾವೇರಿ ಉಸ್ತುವಾರಿ ಸಮಿತಿ 12 ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಿದೆ. ಇದರಿಂದ ತಮಿಳುನಾಡಿಗೆ ತೀವ್ರ ಅನ್ಯಾಯವಾಗಿದೆ. ರೈತರ ಹಿತದೃಷ್ಟಿಯಿಂದ ಜನವರಿಯಲ್ಲಿ 18 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಬೇಕೆಂದು ಪ್ರಮಾಣ ಪತ್ರದಲ್ಲಿ ಮನವಿ ಮಾಡಿದೆ
ಪಿಎಂಕೆ ಮುಖ್ಯಸ್ಥ ಎಸ್ ರಾಮದಾಸ್ ಮಾತನಾಡಿ, ತಮಿಳುನಾಡು ಸರ್ಕಾರದ ಬೇಡಿಕೆಯಾದ 12 ಟಿಎಂಸಿ ಬಿಡಲು ಕರ್ನಾಟಕ ಸರ್ಕಾರ ಒಪ್ಪಲೇಬೇಕು. ಕಾವೇರಿ ಉಸ್ತುವಾರಿ ಸಮಿತಿ ಕೂಡಾ ಇದೇ ಆದೇಶವನ್ನು ಕರ್ನಾಟಕಕ್ಕೆ ನೀಡಿದೆ.
ಕಾವೇರಿ ಕೊಳ್ಳದ ತಿರುವರೂರು ಸಮೀಪದ ಗ್ರಾಮವೊಂದರಲ್ಲಿ ಅಬ್ದುಲ್ ರಹೀಂ ಎಂಬ 55 ವರ್ಷ ರೈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಕಾವೇರಿ ನೀರು ಸಿಗದೆ ಬೆಳೆ ಮೇಲೆ ಸಾಲ ಮಾಡಿಕೊಂಡಿದ್ದ ರಹೀಂ ಬೇರೆ ವಿಧಿ ಇಲ್ಲದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸುಮಾರು 14 ಲಕ್ಷ ಎಕರೆ ಭೂಮಿಯಲ್ಲಿ ಬೆಳೆ ನಾಶವಾಗಲಿದೆ. ಕುರುವೈ ಬೆಳೆ ಕೈಕೊಟ್ಟಿದೆ. ಸಾಂಬಾ ಬೆಳೆ ಸಿಗದಿದ್ದರೆ ರೈತರ ಸ್ಥಿತಿ ಊಹಿಸಲು ಸಾಧ್ಯವಿಲ್ಲ ಎಂದು ಪಿಎಂಕೆ ಮುಖ್ಯಸ್ಥ ರಾಮದಾಸ್ ಹೇಳಿದ್ದರು.












Click it and Unblock the Notifications