ಮಂಗಳೂರಲ್ಲಿ ಬಿಜೆಪಿಗೆ ಭೂತ ಬಿಡಿಸಿದ ಸೋನಿಯಾ

Sonia Gandhi
ಮಂಗಳೂರು, ಅ.18: 'ಭ್ರಷ್ಚಾಚಾರದಿಂದ ತುಂಬಿ ತುಳುಕುತ್ತಿರುವ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಲು ಇದು ಸಕಾಲ. ಕಾಂಗ್ರೆಸ್ ಕಾರ್ಯಕರ್ತರೇ ಚುನಾವಣೆಗೆ ಸಿದ್ಧರಾಗಿ' ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೆಹರೂ ಮೈದಾನದಲ್ಲಿ ಗುರುವಾರ (ಅ.19) ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕರೆ ನೀಡಿದರು.

'ಎಲ್ಲರಿಗೂ ನಮಸ್ಕಾರ, ಎಂದು ಕನ್ನಡದಲ್ಲಿ ಭಾಷಣ ಶುರು ಮಾಡಿದ ಸೋನಿಯಾ ಗಾಂಧಿ ಅವರು ಭಾಷಣ ಮುಗಿಸುವಾಗ ಜೈ ಕರ್ನಾಟಕ ಎಂದು ಘೋಷಿಸಿದ್ದು ವಿಶೇಷ.

ಸೋನಿಯಾ ಗಾಂಧಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಮಾಜದ ಎಲ್ಲಾ ವರ್ಗಗಳಲ್ಲಿ ಭ್ರಷ್ಚಾಚಾರ ತಾಂಡವವಾಡುತ್ತಿದೆ. ಕಚೇರಿಗಳು ಲಂಚದ ಗೂಡಾಗಿದೆ. ಬಿಜೆಪಿ ಸರ್ಕಾರ ಮಾತ್ರ ಜನರ ಸಮಸ್ಯೆ ಆಲಿಸದೆ ಕೈಕಟ್ಟಿ ಕುಳಿತಿದೆ. ಬಿಜೆಪಿ ತನ್ನದೇ ಬಿಕ್ಕಟ್ಟು ಪರಿಹರಿಸಿಕೊಳ್ಳುವುದರಲ್ಲಿ ಮಗ್ನವಾಗಿದೆ. ಇಂಥ ಸರ್ಕಾರ ನಿಮಗೆ ಬೇಕೆ? ಎಂದು ಸೋನಿಯಾ ಪ್ರಶ್ನಿಸಿದರು.

ಸಿಲೆಂಡರ್ ಮಿತಿ ಏರಿಸಿ ನೋಡೋಣ: ಸಮಸ್ಯೆ ಬಂದಾಗ ಬಂದ್ ಕರೆ ನೀಡುವುದಲ್ಲದೆ ಎಲ್ಲದ್ದಕ್ಕೂ ಕೇಂದ್ರ ಸರ್ಕಾರವೇ ಕಾರಣ ಎಂದು ದೋಷಿಸುವ ಬಿಜೆಪಿ ನಾಯಕರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 80,000 ಕೋಟಿ ರು ಅನುದಾನ ಏನು ಮಾಡಿದ್ದಾರೆ ಎಂಬುದು ಲೆಕ್ಕ ತೋರಿಸಲಿ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಸರಿಯಾಗಿ ಉಪಯೋಗಿಸಿಕೊಂಡಿಲ್ಲ.

ಅಡುಗೆ ಅನಿಲ ಮಿತಿ ಇಳಿಕೆ ಮಾಡಿದ್ದಕ್ಕೆ ಅಬ್ಬರಿಸಿದ ಬಿಜೆಪಿ ತಮ್ಮ ಪಕ್ಷದ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾಕೆ ಮಿತಿಯನ್ನು ಏರಿಸಿಲ್ಲ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಎಲ್ ಪಿಜಿ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6 ರಿಂದ 9ಕ್ಕೆ ಏರಿಸಲಾಗಿದೆ. ಕರ್ನಾಟಕ ಸರ್ಕಾರಕ್ಕೆ ಅಡುಗೆ ಅನಿಲ ಮಿತಿಯನ್ನು ಏರಿಸುವ ತಾಕತ್ತಿದೆಯೇ? ಎಂದು ಸೋನಿಯಾ ಎತ್ತರದ ದನಿಯಲ್ಲಿ ಪ್ರಶ್ನಿಸಿದರು.

ಕಚ್ಚಾ ತೈಲ ಬೆಲೆ ನಮ್ಮ ನಿಯಂತ್ರಣದಲ್ಲಿಲ್ಲ. ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಲಿ ಕಾಂಗ್ರೆಸ್ ಸಿಎಂಗಳು ಅನುಸರಿಸಿದ ಮಾರ್ಗ ಬಿಜೆಪಿ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಹಗರಣಗಳನ್ನು ಬಯಲಿಗೆಳೆಯುತ್ತಿರುವ ಆರ್ ಟಿಐ ಯುಪಿಎ ಸರ್ಕಾರದ ಕೊಡುಗೆ ಎಂದು ಸೋನಿಯಾ ಗಾಂಧಿ ಹೇಳಿದರು,

ಲೋಕಾಪಾಲ್ ಮಸೂದೆಗೆ ಬಿಜೆಪಿಯಿಂದಲೇ ತಡೆ ಉಂಟಾಗಿದೆ. ಕೇಂದ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ಕಂಟಕವಾಗಿದೆ. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿ ಬಹಳ ದಿನಗಳಾಗಿದೆ ಎಂದು ಸೋನಿಯಾ ಗಾಂಧಿ ಛೇಡಿಸಿದರು.

ಚುನಾವಣಿಗೆ ಸಿದ್ಧತೆ: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿರೀಕ್ಷೆಯಂತೆ ಕಾಂಗ್ರೆಸ್ ಮಧ್ಯಂತರ ಚುನಾವಣೆ ಸಿದ್ದ ಎಂದು ಘೋಷಿಸಿದ್ದಾರೆ. ನಾಯಕರೆಲ್ಲರೂ ಒಗ್ಗೂಡಿ ಸಾಮೂಹಿಕ ನಾಯಕತ್ವದಲ್ಲಿ ಶ್ರಮಿಸಿದರೆ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಸೋನಿಯಾ ಕರೆ ನೀಡಿದ್ದಾರೆ.

ಸುಮಾರು 20,000 ಕಾರ್ಯಕರ್ತರು, ಮುಖಂಡರು ಭಾಗವಹಿಸಿದ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರ ಭಾಷಣ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ.

ಈ ನಡುವೆ ಸದಸ್ಯರ ನೋಂದಣಿ ಅಭಿಯಾನ ಮಂಗಳವಾರದಿಂದ ಆರಂಭಿಸಿರುವ ಕಾಂಗ್ರೆಸ್ ಸುಮಾರು 45 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+