ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ದಸರಾ ಗಿಫ್ಟ್
ಬೆಂಗಳೂರು,
ಅ.18: ಬೆಂಗಳೂರು, ಅ.18: ದಸರಾ ಹಬ್ಬದ ಕೊಡುಗೆಯಾಗಿ ರಾಜ್ಯ ಸರಕಾರವು ತನ್ನ ನೌಕರರಿಗೆ ಶೇ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. 2012ರ ಜುಲೈನಿಂದ ಅನ್ವಯವಾಗುವಂತೆ ಮೂಲ ವೇತನದಲ್ಲಿ ಶೇ. 4ರಷ್ಟು ಹೆಚ್ಚು dearness allowanace ಸಂದಾಯವಾಗಲಿದೆ. id="toptextpromo">ರಾಜ್ಯ
ಸರಕಾರ ಪರಿಷ್ಕೃತ ವೇತನ ಶ್ರೇಣಿಗೆ ಅನುಗುಣವಾಗಿ ಜುಲೈ1 ರಿಂದ ಪೂರ್ವಾನ್ವಯವಾಗುವಂತೆ ಶೇ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ನೀಡಲು ಸರಕಾರ ತೀರ್ಮಾನಿಸಿದ್ದು, ಈ ಸಂಬಂಧ ಬುಧವಾರ ಆದೇಶ ಹೊರಡಿಸಿದೆ. ಪರಿಷ್ಕೃತ ವೇತನ ರಚನೆಯು 2012ಕ್ಕೆ ಲಭ್ಯವಿದ್ದ ಶೇ. 76.75 ತುಟ್ಟಿಭತ್ಯೆ ವಿಲೀನಕ್ಕೆ ಸಂಬಂಧಿಸಿರುತ್ತದೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಬೆಲೆ ಸೂಚ್ಯಂಕವನ್ನು ಆಧರಿಸಿ ತನ್ನ ನೌಕರರಿಗೆ ಜುಲೈ1 ರಿಂದ ಪೂರ್ವಾನ್ವಯವಾಗುತಂತೆ ತುಟ್ಟಿ ಭತ್ಯೆ ನೀಡಿದ್ದು, ರಾಜ್ಯ ಸರಕಾರ ಕೂಡ ಅದೇ ಮಾದರಿಯಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಶೇ. 7 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದನ್ನು ಸ್ವಾಗತಿಸಿರುವ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ನೌಕರ ವೃಂದದ ಪರವಾಗಿ ಅಭಿನಂದಿಸಿದ್ದಾರೆ.











Click it and Unblock the Notifications