ಎಲ್ಐಸಿಗೆ ಸೆ.1ರಂದು ಹುಟ್ಟುಹಬ್ಬದ ಸಂಭ್ರಮ

2011-12ರಲ್ಲಿ 357 ಲಕ್ಷ ಪಾಲಿಸಿ ಹೊಸ ಪಾಲಿಸಿಗಳನ್ನು ಮಾರಾಟ ಮಾಡಲಾಯಿತು. ಇದು ವಿಮಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾದ ಎಲ್ಲ ಹೊಸ ಪಾಲಿಸಿಗಳಲ್ಲಿ ಶೇ.80.9ರಷ್ಟು ಎಲ್ಐಸಿಯದಾಗಿದೆ. ಒಟ್ಟಾರೆ 81,514.49 ಕೋಟಿ ರು.ನಷ್ಟು ಆದಾಯ ಈ ಪಾಲಿಸಿಗಳಿಂದ ಬಂದಿದ್ದು, 38,955.06 ಕೋಟಿ ರು.ನಷ್ಟು ಆದಾಯ ಪಿಂಚಣಿ ಮತ್ತು ಗ್ರೂಪ್ ಇನ್ಶೂರನ್ಸ್‌ನಿಂದ ಬಂದಿದೆ. ಸಾಂಪ್ರದಾಯಿತ ವ್ಯಾಪಾರದಡಿಯಲ್ಲಿ 284.12 ಲಕ್ಷ ಮತ್ತು ಸಾಮಾಜಿಕ ಭದ್ರತಾ ಸ್ಕೀಂ ಅಡಿಯಲ್ಲಿ 94.44 ಲಕ್ಷ ಪಾಲಿಸಿಗಳನ್ನು ಹೊಸ ವಿಮೆ ಮಾಡಲಾಗಿದೆ.
ಕಳೆದ ವರ್ಷದಲ್ಲಿ 185.7 ಲಕ್ಷ ಜನರ 66,022.82 ಕೋಟಿ ರು.ನಷ್ಟು ಹಣವನ್ನು ಸೆಟ್ಲ್ ಮಾಡಲಾಗಿದೆ. ಪಾವತಿಯ ಅವಧಿ ಮುಗಿಯುವ ಮೊದಲೇ ಶೇ.93.19ನಷ್ಟು ಪಾಲಿಸಿಗಳನ್ನು ಸೆಟ್ಲ್ ಮಾಡಲಾಗಿದೆ. ಶೇ.94.34ನಷ್ಟು ಮರಣಾನಂತರದ ಪಾವತಿಗಳನ್ನು ಕೋರಿಕೆಯಾದ 15 ದಿನಗಳೊಳಗೆ ಪಾವತಿ ಮಾಡಲಾಗಿದೆ. ಒಟ್ಟಾರೆಯಾಗಿ 112,911.82 ಕೋಟಿ ರು.ನಷ್ಟು ಹಣವನ್ನು ಕಳೆದ ವರ್ಷ ಹಿಂತಿರುಗಿಸಲಾಗಿದೆ ಎಂದು ಎಲ್ಐಸಿಯ ಪತ್ರಿಕಾ ಪ್ರಕಟಣೆ ಹೇಳಿದೆ.
ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 'ಜನಶ್ರೀ ಬಿಮಾ ಯೋಜನಾ' ಮತ್ತು 'ಆಮ್ ಆದ್ಮಿ ಬಿಮಾ ಯೋಜನಾ' ಎಂಬ ಎರಡು ಪಾಲಿಸಿಗಳನ್ನು ಸಾಮಾಜಿಕ ಭದ್ರತಾ ಗ್ರೂಪ್ ಸ್ಕೀಂ ಅಡಿಯಲ್ಲಿ ನೀಡಲಾಗುತ್ತಿದೆ. ಜನಶ್ರೀ ಬಿಮಾ ಯೋಜನಾ ಮತ್ತು ಆಮ್ ಆದ್ಮಿ ಬಿಮಾ ಯೋಜನಾ ಪಾಲಿಸಿ ಹೊಂದಿರುವವರ ಮಕ್ಕಳಿಗೆ 'ಶಿಕ್ಷಾ ಸಹಯೋಗ ಯೋಜನಾ' ಎಂಬ ಉಚಿತ ಸ್ಕಾಲರ್ಶಿಪ್ ನೀಡಲಾಗುತ್ತಿದೆ.
ಎಲ್ಐಸಿಯ ಗೋಲ್ಡನ್ ಜ್ಯುಬಿಲಿ ಆಚರಣೆಯ ಅಂಗವಾಗಿ ದೇಶದಾದ್ಯಂತ 211 ಯೋಜನೆಗಳಿಗೆ ಭಾರತೀಯ ಜೀವವಿಮಾ ನಿಗಮ ಬೆಂಬಲ ನೀಡಿದೆ. ಸರಕಾರೇತರ ಸಂಸ್ಥೆಗಳ ಮುಖಾಂತರ ಆರ್ಥಿಕವಾಗಿ ದುರ್ಬಲವಾಗಿರುವ ಜನತೆಗೆ ಹಣಕಾಸು ನೆರವನ್ನು ಒದಗಿಸಿ ಸಾಮಾಜಿಕ ಕಳಕಳಿಯನ್ನು ಎಲ್ಐಸಿ ಮೆರೆದಿದೆ. ಸತತವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಎಲ್ಐಸಿ ರೀಡರ್ಸ್ ಡೈಜೆಸ್ಟ್ ಟ್ರಸ್ಟ್ ಬ್ರಾಂಡ್ ಅವಾರ್ಡ್, ಬಿಸಿನೆಸ್ ಸೂಪರ್ ಬ್ರಾಂಡ್ಸ್, ಇಟಿ ಬ್ರಾಂಡ್ ಇಕ್ವಿಟಿ ಅವಾರ್ಡ್ಸ್, ಗೋಲ್ಡನ್ ಪಿಕಾಕ್ - ಇನೋವೇಟಿವ್ ಪ್ರಾಡಕ್ಟ್ ಅವಾರ್ಡ್, ಔಟ್‌ಲುಕ್ ಮನಿ ಅವಾರ್ಡ್ ಮುಂತಾದ ಪ್ರಶಸ್ತಿಗಳನ್ನು ಎಲ್ಐಸಿ ಪಡೆದಿದೆ.
ಅಂದ ಹಾಗೆ, ಎಲ್ಐಸಿ ಪ್ರೀಮಿಯಂ ಸರಿಯಾದ ಸಮಯಕ್ಕೆ ಕಟ್ತಿದ್ದೀರಿ ತಾನೆ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications