ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ,ಜತೆಗೆ ಈಶ್ವರಪ್ಪನ್ನೂ ಬದಲಿಸಿ: ಬಿಎಸ್‌ವೈ ಬಣ

By Srinath
|
Google Oneindia Kannada News

yeddyurappa-team-demands-eshwarappa-ouster
ಬೆಂಗಳೂರು, ಜೂನ್ 7: ಸದ್ಯಕ್ಕೆ ಡಿವಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಎಂದು ಅಬ್ಬರಿಸಿ, ಬೊಬ್ಬಿರಿಯುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಣಕ್ಕೆ ಈಗ ಬ್ರಹ್ಮಾಸ್ತ್ರವೊಂದು ಸಿಕ್ಕಿದೆ. ಅದು ಈಶ್ವರಪ್ಪರಿಂದಲೇ ಉದ್ಭವವಾಗಿರುವ, ಅವರ ವಿರುದ್ಧವೇ ಬಳಕೆಯಾಗಲಿರುವ ಅಸ್ತ್ರ.

ಒಂದು ಕಾಲದಲ್ಲಿ ಬಿಜೆಪಿಗೆ ಆಪತ್ಬಾಂಧನವರಾಗಿದ್ದ ಸ್ವತಂತ್ರ ಶಾಸಕರನ್ನು ಯಾವಾಗ ಈಶ್ವರಪ್ಪ 'ಬೀದಿ ನಾಯಕರು' ಎಂದು ಮೊನ್ನೆಯಷ್ಟೆ ರಂಪಾಟ ನಡೆಸಿದ್ದರು. ಇದು ಹೆಚ್ಚಾಗಿ ಯಡಿಯೂರಪ್ಪ ಆಡಳಿತ ಕಾಲದಲ್ಲಿ ಪಕ್ಷಕ್ಕೆ ಆಸರೆಯಾಗಿದ್ದ ಶಾಸಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ ಮಾತಾಗಿತ್ತು. ಇದು ಕಿವಿಗೆ ಬಿದ್ದಿದ್ದೆ ತಡ ಕಿವಿನಿಮಿರಿಸಿಕೊಂಡ ಯಡಿಯೂರಪ್ಪ ತಮ್ಮ ಅನುಯಾಯಿಗಳನ್ನು ಈಶ್ವರಪ್ಪ ವಿರುದ್ಧ ಹರಿಯಬಿಟ್ಟಿದ್ದಾರೆ.

ಹಾಗಾಗಿ, ಯಡಿಯೂರಪ್ಪ ಬೆಂಬಲಿಗರು ಮುಖ್ಯಮಂತ್ರಿ ಸದಾನಂದ ಗೌಡರ ಬದಲಾವಂಣೆ ಜತೆಗೆ ಈಶ್ವರಪ್ಪ ಬದಲಾವಣೆಗೂ ಹೈಕಮಾಂಡ್ ಮೇಲೆ ಒತ್ತಡ ತರಲು ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಈ ಹಿಂದಿನಂತೆ ಜಗದೀಶ್ ಶೆಟ್ಟರ್ ಹೆಸರನ್ನು ತೇಲಿಬಿಟ್ಟಿರುವ ಭಿನ್ನರು, ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಸ್ಥಾನಕ್ಕೆ ಯಾರ ಹೆಸರನ್ನು ಸೂಚಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಬಾಯ್ಬಡುಕ ಈಶ್ವರಪ್ಪದು ಸ್ವಯಂಕೃತಾಪರಾಧ: ಇತ್ತೀಚೆಗೆ ಈಶ್ವರಪ್ಪ ನೀಡಿರುವ ಹೇಳಿಕೆಗಳು, ಅವರ ವರ್ತನೆ ಯಡಿಯೂರಪ್ಪ ಬಣದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. (ಅದಕ್ಕೂ) ಮೊದಲೇ ಈಶ್ವರಪ್ಪನವರು 'ಕಳಂಕಿತ' ಯಡಿಯೂರಪ್ಪ ಅವರನ್ನು ಸಾಕಷ್ಟು ಕಿಚಾಯಿಸಿದ್ದಾರೆ. ಯಡಿಯೂರಪ್ಪ ಒಬ್ಬ ಆರೋಪಿ ಎಂದು ನೋರೆಂಟು ಸಲ ಹೇಳಿ ಅವರಲ್ಲಿ ಅಪರಾಧಿ ಭಾವ ತುಂಬಿದ್ದ ಈಶ್ವರಪ್ಪ ಕೊನೆಗೆ, ಆತ್ಮಹತ್ಯೆ ವಿಷಯವನ್ನೂ ಮುಂದಿಟ್ಟರು.

ಆಗಲೇ ಈಶ್ವರಪ್ಪಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಯಡಿಯೂರಪ್ಪ ನಿಶ್ಚಯಿಸಿದ್ದರು. ಆದರೆ ಈಗ ಅನಾಯಾಸವಾಗಿ ಅವಕಾಶವೊಂದು ದೊರೆತಿದೆ. ಬಾಯ್ಬಡುಕ ಈಶ್ವರಪ್ಪದು ಇದು ಸ್ವಯಂಕೃತಾಪರಾಧ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಈಶ್ವರಪ್ಪನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದಿದ್ದರೆ ಅದು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಪ್ರಭಾವಿ ನಾಯಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೈಕಮಾಂಡಿಗೆ ಮನವರಿಕೆ ಮಾಡಿಕೊಡಲು ಈ ಬಣ ನಿರ್ಧರಿಸಿದೆ.

English summary
A new twist to BJP crisis- Now B S Yeddyurappa team demands not only CM Sadananda Gowda's change but also KS Eshwarappa from the party chief post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X