ಮೈಸೂರಿನ ಚರ್ಚಲ್ಲಿ ವಿದೇಶಿಯರಿಗೆ ಡ್ರೆಸ್ ಕೋಡ್

ಮೈಸೂರಿನಲ್ಲಿರುವ ಐತಿಹಾಸಿಕ ಸೇಂಟ್ ಫಿಲೋಮಿನಾ ಚರ್ಚಿಗೆ ವಿದೇಶಿಯರು ಸೇರಿದಂತೆ ಸಹಸ್ರಾರು ಪ್ರವಾಸಿಗರು ಪ್ರತಿದಿನ ಬರುತ್ತಾರೆ. ಆದರೆ, ವಿದೇಶಿಯರು ಅಸಭ್ಯವಾಗಿ ಉಡುಪು ಧರಿಸಿ ಬರುವುದರ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲು ಚರ್ಚ್‌ನ ಆಡಳಿತ ವರ್ಗ ಮುಂದಾಗಿದೆ.
"ಇದು ಪ್ರಾರ್ಥನಾ ಸ್ಥಳ, ಹೇಗೆಂದ ಹಾಗೆ ಉಡುಪು ಧರಿಸಿ ಬರಲು ಇದೇನು ಮಾರುಕಟ್ಟೆಯಲ್ಲ" ಎಂದು ಡ್ರೆಸ್ ಕೋಡ್‌ಗೆ ಅನುಮತಿ ನೀಡಿರುವ ಮೈಸೂರಿನ ಬಿಷಪ್ ಅವರು ಅಸಹ್ಯವಾಗಿ ಉಡುಪಿ ಧರಿಸಿ ಬರುತ್ತಿರುವ ವಿದೇಶಿಯರ ಬಗ್ಗೆ ಖಾರವಾಗಿ ನುಡಿದಿದ್ದಾರೆ. ಚರ್ಚ್‌ಗಳಲ್ಲಿ ಡ್ರೆಸ್ ಕೋಡ್ ರೂಪಿಸುತ್ತಿರುವುದು ಇದೇ ಮೊದಲು.
ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಕಾರದೊಂದಿಗೆ 1936ರಲ್ಲಿ ನಿರ್ಮಿತವಾದ ಈ ಐತಿಹಾಸಿಕ ರೋಮನ್ ಕ್ಯಾಥೊಲಿಕ್ ಚರ್ಚಿಗೆ ದಿನಂಪ್ರತಿ 4 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಿದೇಶಿಯರು ಮೈದೋರುವಂತೆ ಅಸಭ್ಯವಾಗಿ ಡ್ರೆಸ್ ಧರಿಸಿ ಬರುತ್ತಿರುವುದು ಸ್ಥಳೀಯ ನಿವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಹಾಗೆಯೆ, ಚರ್ಚಿನಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಸಾರ್ವಜನಿಕವಾಗಿ ಅಪ್ಪಿಕೊಳ್ಳುವುದು ಮತ್ತು ತುಟಿಗೆ ತುಟಿ ಒತ್ತಿ ಮುತ್ತು ನೀಡುವುದು ಕೂಡ ಅನೇಕರ ಆಕ್ಷೇಪಕ್ಕೆ ಕಾರಣವಾಗಿತ್ತು.
ಭಕ್ತಾದಿಗಳ ಪ್ರತಿಕ್ರಿಯೆಗೆ ಸ್ಪಂದಿಸಿರುವ ಚರ್ಚ್‌ನ ಪಾದ್ರಿ ಕೆ.ಎ. ವಿಲಿಯಂ ಅವರು, "ವಿದೇಶಿಯರ ಅಸಭ್ಯ ದಿರಿಸುಗಳ ಬಗ್ಗೆ ಮತ್ತು ಅಸಹ್ಯ ವರ್ತನೆಗಳ ಬಗ್ಗೆ ಅನೇಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಚರ್ಚ್‌ನ ಸಮಿತಿ ಸದಸ್ಯರು ಮತ್ತು ಮೈಸೂರಿನ ಹಿರಿಯ ಧರ್ಮಾಧಿಕಾರಿಗಳ ಜೊತೆ ಚರ್ಚಿಸಿದ ನಂತರ ಡ್ರೆಸ್ ಕೋಡ್ ರೂಪಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ. ಡ್ರೆಸ್ ಕೋಡ್ ಇದ್ದರೂ ಅಸಭ್ಯವಾಗಿ ದಿರಿಸು ಧರಿಸಿ ಬರುವವರನ್ನು ಚರ್ಚಿನಿಂದ ಹೊರಹೋಗಲು ಸೂಚಿಸಲಾಗುವುದು ಎಂದು ಚರ್ಚ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೇರಿ ಅವರು ತಿಳಿಸಿದ್ದಾರೆ.
ಹಿಂದೂ ದೇವಸ್ಥಾನದಲ್ಲಿಯೂ ಉಡುಪು ನೀತಿ ಬೇಕೆ? : ಡ್ರೆಸ್ ಕೋಡನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಕೆಲ ಮಠಗಳು ಇತ್ತೀಚಿನ ದಿನಗಳಲ್ಲಿ ಇದನ್ನು ಸಡಿಲಿಸಿವೆ. ಗರ್ಭ ಗುಡಿ ಪ್ರವೇಶಿಸಲು ಯಾರನ್ನೂ ಬಿಡದಿದ್ದ ಕೆಲ ದೇವಸ್ಥಾನಗಳು ಕೈ ಬೆಚ್ಚಗಾಗಿಸಿದರೆ ನೇರವಾಗಿ ಗರ್ಭಗುಡಿ ಪ್ರವೇಶಿಸಿ ಆರತಿ ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಡುತ್ತಿವೆ. ಇನ್ನು ಅನೇಕ ದೇವಸ್ಥಾನಗಳಲ್ಲಿ ಯುವತಿಯರು ಜೀನ್ಸ್ ಧರಿಸಿ ಬಂದರೂ ಅಷ್ಟೇ, ಮಿನಿ ಧರಿಸಿ ಬಂದರೂ ಅಷ್ಟೇ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿವೆ. ಕರ್ನಾಟಕದ ಕೆಲ ಮಠಗಳನ್ನು ಹೊರತುಪಡಿಸಿದರೆ ಯಾವ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಅನ್ನುವುದು ಇಲ್ಲವೇ ಇಲ್ಲ. ಹಿಂದೂ ದೇವಸ್ಥಾನಗಳಲ್ಲಿಯೂ ಡ್ರೆಸ್ ಕೋಡ್ ತರಬೇಕೆ?
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications