ನಾನೇ ಈಶ್ವರ, ನಾನೇ ನಾಥ- ಉಳಿದಿದ್ದೆಲ್ಲ ನಶ್ವರ

'ನಾನು ಯಾವ ನಾಯಕರ ಹಿಂದೆ ಬಿದ್ದು ಬೇಡಿಕೆ ಸಲ್ಲಿಸಿಲ್ಲ. ಅರ್ಹವಾಗಿ ಸಿಗಬೇಕಾದ್ದು ಕೇಳಿದೆ ಅಷ್ಟೇ. ನನ್ನ ಬಗ್ಗೆ ಯಾರೊಬ್ಬರು ಅನುಕಂಪದಿಂದ ಮಾತನಾಡುವುದು ಬೇಡ'. ಮೇ.24ರಂದು ನಡೆಯುವ ಬಿಜೆಪಿ ಕಾರ್ಯಕಾರಣಿ ಸಭೆಗೆ ನಾನು ಹೋಗುತ್ತಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈಶ್ವರಪ್ಪನವರು BSY ಸ್ಥಿತಿ ಬಂದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದಿರುವುದು ಅನುಕಂಪದ ಮಾತಿನಂತೆ ತೋರುತ್ತಿಲ್ಲ. ಅದೊಂದು ರೀತಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಹೇಳಿಕೆಯ ರೀತಿ ಇದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಮಲ್ಲೇಶ್ವರಂನ ಜನಸಂಪರ್ಕ ಕಚೇರಿಯಲ್ಲಿ ಕೂತ ಯಡಿಯೂರಪ್ಪ,
ನನ್ನ ವಿರುದ್ಧ ಹೈಕಮಾಂಡ್‌ಗೆ ಈಶ್ವರಪ್ಪ, ಸದಾನಂದ ಗೌಡರು ಪುಟಗಟ್ಟಲೇ ಪತ್ರ ಬರೆದ್ದಿದ್ದರು. ಈಗ ಅನುಕಂಪದ ಮಾತನಾಡುವ ಪ್ರಯತ್ನ ಏಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗಿನಿಂದ ಪಕ್ಷದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಆದೆ, ಈಗ ಸಭ್ಯತೆಯ ನಾಟಕ ಏಕೆ ಆಡುತ್ತಿದ್ದಾರೆ. ಇವರನ್ನು ನಂಬುವಂತಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications