KIADB ಹಗರಣ: ಮುರುಗೇಶ್ ನಿರಾಣಿಗೆ ಕ್ಲೀನ್ ಚಿಟ್

Murugesh Nirani
ಬೆಂಗಳೂರು, ಮೇ.21: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಬೃಹತ್ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಅವರಿಗೆ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಕೋರ್ಟ್ ಸೋಮವಾರ(ಮೇ.21) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಣಿಗೆ ಕ್ಲೀನ್ ಚಿಟ್ ನೀಡಿದೆ. ಮುಂದಿನ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಲಾಗಿದೆ.

ಉದ್ಯಮಿ ಆಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು, ತನಿಖಾವಧಿ ವಿಸ್ತರಣೆ ಕೋರಿದ್ದ ಲೋಕಾಯುಕ್ತ ಪೊಲೀಸರ ಮನವಿಯನ್ನು ಪುರಸ್ಕರಿಸಿದ್ದಾರೆ.

ಕಟ್ಟಾಗೆ ಇಲ್ಲ ರಿಲೀಫ್: ಪ್ರಸ್ತುತ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮೇಲೂ ಆರೋಪಗಳಿದ್ದು, ತನಿಖೆ ಮುಂದುವರೆಸುವಂತೆ ಲೋಕಾಯುಕ್ತ ನ್ಯಾ. ಸುಧೀಂದ್ರ ರಾವ್ ಅವರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದಾರೆ.

ಉಳಿದಂತೆ, ಎಚ್ ಆರ್ ನಿರಾಣಿ, ಶರಣ ಬಸಯ್ಯ, ಕರಿಯಣ್ನನವರ್, ಬೇಗೂರು ರುದ್ರಮೂರ್ತಿ,ಪೂರ್ಣಚಂದ್ರ, ಆರ್ ವಿ ವಡ್ನಾಳ್, ಶಾಂತ ಸುಬೀರ ಬೇಲೂರು, ಮೋಹನ್ ಎಂ, ಹೀರೇಮಠ ಮತ್ತು ಎಂ ರೋಷಯ್ಯ ಎಂಬುವರ ಮೇಲೆ ಆರೋಪವನ್ನು ಹೊರೆಸಲಾಗಿದೆ.

ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ಮೂಲಕ ರಾಜ್ಯದ ವಿವಿಧ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದ 1, 690ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಮ್ಮ ಕುಟಂಬ ಸದಸ್ಯರ ಮತ್ತು ಆಪ್ತರ ಒಡೆತನದ ಕಂಪೆನಿಗಳಿಗೆ ನಿಯಮ ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ನಿರಾಣಿ ಅವರ ಮೇಲೆ ಆರೋಪವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+