ಉಗ್ರ ಕಸಬ್ ಗೆ ಇನ್ಮುಂದೆ ಮಾಂಸಾಹಾರ ನೀಡುವುದಿಲ್ಲ

no-non-veg-food-for-pak-gunman-kasab
ಮುಂಬೈ, ಮೇ, 21: ಮುಂಬೈ ದಾಳಿಕೋರ, ಪಾಕಿಸ್ತಾನದ ಭಯೋತ್ಪಾದಕ 25 ವರ್ಷದ ಅಜ್ಮಲ್ ಕಸಬ್ ಗೆ ಇನ್ನು ಮುಂದೆ ಮಾಂಸಾಹಾರ ನೀಡುವುದಿಲ್ಲ. ಅವನಿನ್ನು ಶಾಖಾಹಾರಕ್ಕೆ ಒಗ್ಗಿಕೊಳ್ಳಬೇಕು ಎಂದು ಆರ್ಥರ್ ರೋಡ್ ಜೈಲು ಅಧಿಕಾರಿಗಳು ಹೇಳಿದ್ದಾರೆ.

ದಾಳಿಯ ವೇಳೆ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ ಕಸಬ್ ಗೆ ಮಾಂಸಾಹಾರ ತಿನ್ನಿಸಲು ಇದುವರೆಗೂ 6 ಪೊಲೀಸ್ ಪೇದೆಗಳು ವಿಶೇಷ ಕರ್ತವ್ಯದಲ್ಲಿದ್ದರು. ಇದು ಜೈಲು ನಿಯಮಗಳಿಗೆ ವ್ಯತಿರಿಕ್ತವಾಗಿತ್ತು.

ಇದಕ್ಕೆ ಮುಂಬೈ ಪೊಲೀಸರು ತಡವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕಸಬ್ ಗೆ ಮಾಂಸಾಹಾರ ತಿನ್ನಿಸುವುದನ್ನು ನಿಲ್ಲಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕರ್ನಾಟಕದ ಜಗದೀಶ್ ಶೆಟ್ಟಿ ಸೇರಿದಂತೆ ಕೆಲವು ಕೈದಿಗಳು ಹಾಗೂ ಪೊಲೀಸರು ಕಸಬ್ ಗಾಗಿ ಮಾಂಸಾಹಾರ ಸಿದ್ಧಪಡಿಸುತ್ತಿದ್ದರು.

ಅವನಿಗೀಗ ಜೈಲುವಾಸಿಗಳು ಸಿದ್ಧಪಡಿಸುವ ಜೈಲೂಟವನ್ನೇ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೆ ಗುರಿಯಾದ ಕೈದಿಗಳು ಸೇರಿ ಜೈಲಿನಲ್ಲಿ ಅಡುಗೆ ಮಾಡುತ್ತಾರೆ. ವಿಚಾರಣೆ ಹಂತದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಮಾಂಸಾಹಾರ ನೀಡಲಾಗಿತ್ತು.

ಪಾಕಿಸ್ತಾನದ ಮಾಂಸ ಮಾರಾಟಗಾರನ ಮಗನಾದ ಕಸಬ್ 2008ರ ನವೆಂಬರ್ 26ರಂದು ನೂರಾರು ಮಂದಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥನೆಂದು ಘೋಷಿಸಿದ್ದು, 2010ರಿಂದ ಜೈಲಿನಲ್ಲಿದ್ದಾನೆ.

ಅಷ್ಟೇ ಅಲ್ಲ... ಕಸಬ್ ಗೆ ನೀಡಲಾಗಿದ್ದ ಇನ್ನೂ ಕೆಲವು ರಿಯಾಯಿತಿಗಳನ್ನು ವಾಪಸ್ ಪಡೆಯಲಾಗಿದೆ. ಸೂರ್ಯ ಮುಳುಗಿದ ಮೇಲೆ ಅವನಿಗೆ ಊಟ ನಿಡಲಾಗುತ್ತಿತ್ತು. ಆದರೆ ಈಗ ಜೈಲು ನಿಯಮದ ಪ್ರಕಾರ ಮಧ್ಯಾಹ್ನ 3.30ಕ್ಕೇ ರಾತ್ರಿಯೂಟ ನೀಡಲಾಗುವುದು. ಅದು ಜೈಲಿನೊಳಗೆ ಕೈದಿಗಳಿಗೆ ದಿನದಂತ್ಯ ಸಮಯ.

ಜೈಲಿನಲ್ಲಿ ಊಟದ ಸಮಯ:
ಬೆಳಗ್ಗೆ 7 ಗಂಟೆಗೆ - ತಿಂಡಿ: ದೋಸೆ, ಉಪ್ಪಿಟ್ಟು, 100 ಮಿಲೀ ಹಾಲು, ಚಹಾ
ಬೆಳಗ್ಗೆ 10 ಗಂಟೆಗೆ - ಲಂಚ್: ದಾಲ್, ರೋಟಿ, ತರಕಾರಿ
ಮಧ್ಯಾಹ್ನ 3.30ಕ್ಕೆ - ರಾತ್ರಿಯೂಟ: ದಾಲ್, ರೋಟಿ, ಅನ್ನ, ತರಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+