ಮಹಾಂತೇಶ್ ಹತ್ಯೆ : ಆರೋಪಿಗಳ ಗುರುತು ನಿಗೂಢ

ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿರುವ ಈ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸೋಮವಾರ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಡನೆ ಮಾತನಾಡಿದ ಅಶೋಕ್ ಅವರು, ನಾಲ್ವರನ್ನು ಈಗಾಗಲೆ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರ ತಂಡವನ್ನು ರಾಜ್ಯದ ಹೊರಗೂ ಕಳಿಸಲಾಗಿದೆ ಎಂದು ನುಡಿದರು.
ಏ.15ರಂದು ಏಟ್ರಿಯಾ ಹೋಟೆಲ್ ಬಳಿ ಸಹಕಾರಿ ಇಲಾಖೆಯ ಲೆಕ್ಕ ವಿಭಾಗದ ಉಪ ನಿರ್ದೇಶಕರಾಗಿದ್ದ ಮಹಾಂತೇಶ್ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಮೇ 20ರಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದರು.
ಇನ್ನೆರಡು ದಿನಗಳಲ್ಲಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಲಿದ್ದಾರೆ. ಅವರ ಸುಳಿವು ಪೊಲೀಸರಿಗೆ ದೊರೆತಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಪತ್ರಕರ್ತರಿಗೆ ತಿಳಿಸಿದ್ದಾರೆ. ಪೊಲೀಸರು ಅತ್ಯುತ್ತಮವಾಗಿ ಕರ್ತವ್ಯ ನಿಭಾಯಿಸುತ್ತಿದ್ದು, ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಬೇರೆಬೇರೆ ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಲ್ಲಿ ಅನೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಮಹಾಂತೇಶ್ ಅವರು ವರದಿ ನೀಡಿದ್ದರು. ಅವರ ಈ ದಕ್ಷತೆಯೇ ಜೀವಕ್ಕೆ ಮುಳುವಾಯಿತು. ಈ ಘಟನೆಗೆ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಪಾರುಮಾಡಲು ರಾಜಕಾರಣಿಗಳೇ ಯತ್ನಿಸುತ್ತಿದ್ದಾರೆ ಎಂದು ಮಹಾಂತೇಶ್ ಅವರು ಪತ್ನಿಯೂ ಆರೋಪಿಸಿದ್ದರು.












Click it and Unblock the Notifications