ಜಗನ್ ಬಂಧನ ಮುಂದೂಡುತ್ತಿರುವ ಸೋನಿಯಾ

ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸುಪುತ್ರ ಜಗನ್ ರನ್ನು ಬಂಧಿಸದಂತೆ ಖುದ್ದು ಸೋನಿಯಾ ಗಾಂಧಿ ಅವರೇ ತಾಕೀತು ಮಾಡಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಸೋನಿಯಾ ಅಭಯ ಹಸ್ತ: ಪರೋಕ್ಷವಾಗಿ ಇತ್ತೀಚೆಗೆ ಯುಪಿಎಗೆ ಬೆಂಬಲ ನೀಡುವುದಾಗಿ ಜಗನ್ ಘೋಷಿಸಿದ್ದೇ ತಡ 'ಜಗನ್ ರನ್ನು ಮುಟ್ಟಬೇಡಿ' ಎಂದು ಸೋನಿಯಾ ಗಾಂಧಿ ಅವರು ಸಿಬಿಐಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ಟಿಡಿಪಿ ನಾಯಕರಾದ ಗಾಲಿ ಮುದ್ದುಕೃಷ್ಣಮ್ ನಾಯ್ಡು ಮತ್ತು ಬೊಜ್ಜಾಲ ಗೋಪಾಲಕೃಷ್ಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಕರಣದ A1 ಆರೋಪಿ ಜಗನ್ ರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಸ್ವತಃ ವಿಚಾರಣಾ ನ್ಯಾಯಾಲಯವೇ ತರಾಟೆಗೆ ತೆಗೆದುಕೊಂಡಿದ್ದರೂ ಸಿಬಿಐ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿಸಿದ ನಾಯಕರು, ಬೊಫೋರ್ಸ್ ಹಗರಣದಿಂದ ಹಿಡಿದು ಬಹುತೇಕ ಎಲ್ಲ ಹಗರಣಗಳಲ್ಲೂ ಸ್ವತಃ ಸೋನಿಯಾ ಸಹ ಭಾಗಿ ಎಂದು ಆರೋಪಿಸಿದ್ದಾರೆ.












Click it and Unblock the Notifications