ಕೇಸರಿ ಶಾಲು ಹೊದ್ದ ಡಿಸಿ, ಎಸ್ಪಿಗೆ ಬುಲಾವ್

mangalore-dc-sp-saffron-shawl-issue-shrc-notice
ಮಂಗಳೂರು, ಮೇ 3: ಸಾರ್ವಜನಿಕ ಸಮಾರಂಭವೊಂದರಲ್ಲಿ ಕೇಸರಿ ಶಾಲು ಹೊದ್ದುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಎಸ್ ಚನ್ನಪ್ಪ ಗೌಡ ಮತ್ತು ನಗರ ಪೊಲೀಸ್ ಆಯುಕ್ತ ಸೀಮಂತಕುಮಾರ್ ಸಿಂಗ್ ಅವರಿಬ್ಬರಿಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗಾಗಿ ಆಯೋಗದ ಪ್ರಾದೇಶಿಕ ಕಚೇರಿಗೆ ಮೇ 7ರಂದು ಹಾಜರಾಗುವಂತೆ ಆಯೋಗ ಸೂಚಿಸಿದೆ.

2011ರ ಡಿಸೆಂಬರ್ 11ರಂದು ಏನಾಗಿತ್ತೆಂದರೆ ... ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡಾಕೂಟ ನಡೆದಿತ್ತು. ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಈ ಕ್ರೀಡಾಕೂಟವನ್ನು ಆಯೋಜಿಸಿದ್ದರು. ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚನ್ನಪ್ಪ ಗೌಡ ಮತ್ತು ಸೀಮಂತಕುಮಾರ್ ಅವರು ಇಡೀ ಕಾರ್ಯಕ್ರಮದುದ್ದಕ್ಕೂ ಕೊರಳಿಗೆ ಕೇಸರಿ ಶಾಲುವನ್ನು ಬಿಗಿದುಕೊಂಡಿದ್ದರು.

ಇದರ ವಿರುದ್ಧ ಅನೇಕ ಪ್ರಗತಿಪರ ಒಕ್ಕೂಟಗಳು ಧ್ವನಿಯೆತ್ತಿದ್ದವು. ಕರ್ನಾಟಕ ಕೋಮು ಸೌಹಾರ್ಧ ವೇದಿಕೆಯು (KKSV) 'ಆಯಕಟ್ಟಿನ ಸ್ಥಾನದಲ್ಲಿರುವ ಸರಕಾರದ ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ಸಾರ್ವಜನಿಕವಾಗಿ ಸಂಘಟನೆಯೊಂದಕ್ಕೆ ಒಲವು ವ್ಯಕ್ತಪಡಿಸಿರುವುದನ್ನು ಆಕ್ಷೇಪಿಸಿತ್ತು. ಅಲ್ಪ ಸಂಖ್ಯಾತರಿಗೆ ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಅವರಲ್ಲಿ ಅಭದ್ರತೆಯ ಭಾವ ಕಾಡುತ್ತದೆ' ಎಂದು ಆತಂಕ ವ್ಯಕ್ತಪಡಿಸಿತ್ತು.

ಜತೆಗೆ, ರಾಜ್ಯ ಮಾನವ ಹಕ್ಕುಗಳ ಆಯೋಗ, ಲೋಕಾಯುಕ್ತ, ಕೇಂದ್ರ ಮತ್ತು ರಾಜ್ಯ ಗೃಹ ಕಾರ್ಯದರ್ಶಿಗಳಿಗೆ ದೂರನ್ನು ನೀಡಿತ್ತು. ಇದಕ್ಕೆ ಸ್ಪಂದಿಸಿರುವ ಆಯೋಗವು ಇಬ್ಬರಿಗೂ ನೋಟಿಸ್ ನೀಡಿದ್ದು, ವಿವರಣೆ ನೀಡುವಂತೆ ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+