ಬೈಕ್‌ನಿಂದ ಬಿದ್ದು ಇನ್ಫೋಸಿಸ್ ಉದ್ಯೋಗಿ ಸಾವು
ಬೆಂಗಳೂರು,
ಮೇ. 3 : ಎಲೆಕ್ಟ್ರಾನಿಕ್ ಸಿಟಿಯಿಂದ ದ್ವಿಚಕ್ರ ವಾಹನದಲ್ಲಿ ಬರುವಾಗ ಮೂರ್ಛೆ ಬಂದು ಬಿದ್ದು ಇನ್ಫೋಸಿಸ್‌ನ ಉದ್ಯೋಗಿಯೊಬ್ಬರು ಮೃತವಾದ ದುರಂತ ಘಟನೆ ಹೊಸೂರು ರಸ್ತೆಯಲ್ಲಿರುವ ಸಿಂಗಸಂದ್ರದ ಬಳಿ ಗುರುವಾರ ನಡೆದಿದೆ. id="toptextpromo">ಮೃತನನ್ನು
ಶರಣಬಸಪ್ಪ ಪಾಟೀಲ್ (25) ಎಂದು ಗುರುತಿಸಲಾಗಿದೆ. ಬೈಕ್ ಓಡಿಸುತ್ತಿದ್ದಾಗಲೇ ಮೂರ್ಛೆರೋಗ ಬಂದು ಶರಣಬಸಪ್ಪ ಬಿದ್ದಿದ್ದಾರೆ. ಅವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. id='are-slot-1' class='oiad oi-axt oiadv'> id='top-searched-articles'>ಗಾಡಿ
ಓಡಿಸುವಾಗಲೇ ಹೃದಯಾಘಾತವೂ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೋಸ್ಟ್ ಮಾರ್ಟಂಗಾಗಿ ಅವರ ದೇಹವನ್ನು ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಖರವಾದ ಕಾರಣ ತಿಳಿದುಬರಲಿದೆ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications