ಚಿನ್ನದ ಮೇಲೆ ಹೆಚ್ಚಿನ ಸುಂಕ, ಜ್ಯುವೆಲ್ಲರಿಗಳು ಬಂದ್

ಮೈಸೂರಿನಲ್ಲಿ ಅತಿ ಹೆಚ್ಚು ವ್ಯಾಪಾರಿಗಳಿರುವ ಅಶೋಕ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಗಳು ಬಂದ್ ಆಗಿತ್ತು. ಚಾಮುಂಡಿಪುರಂ, ವಿದ್ಯಾರಣ್ಯಪುರ, ಯಾದಗಿರಿಯಲ್ಲೂ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.
ಆದರೆ, ಬೆಂಗಳೂರಿನಲ್ಲಿ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ದೊಡ್ಡ ದೊಡ್ಡ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತಿತ್ತು. ಮಧ್ಯಮ ಗಾತ್ರದ ಚಿನ್ನದ ವರ್ತಕರು ಮಾತ್ರ ಅಂಗಡಿ ಬಂದ್ ಮಾಡಿ ಹಕ್ಕೊತ್ತಾಯ ಮಾಡುತ್ತಾ, ಪ್ರತಿಭಟನೆಗಿಳಿದಿದ್ದರು.
The Bombay Bullion Association and All India Gems and Jewellery Trade Federation ಕೂಡಾ ವರ್ತಕರ ಬೆನ್ನ ಹಿಂದೆ ನಿಂತಿರುವುದು ಪ್ರತಿಭಟನೆಯ ಕಾವು ಹೆಚ್ಚಿಸಿದೆ.
ಯುಗಾದಿ ಹಬ್ಬ ಹತ್ತಿರ ಇರುವಾಗ ಚಿನ್ನದ ವರ್ತಕರು ಅಂಗಡಿ ಬಂದ್ ಮಾಡಿ ಕುಳಿತಿರುವುದು ಭಾರಿ ನಷ್ಟಕ್ಕೆ ದಾರಿ ಮಾಡಿಕೊಟ್ಟಂತ್ತಾಗಿದೆ.
ಕೇಂದ್ರ ಬಜೆಟ್ 2012-13ನಲ್ಲಿ ಆಮದು ಗುಣಮಟ್ಟದ ಚಿನ್ನದ ಮೇಲಿನ ತೆರಿಗೆಯಲ್ಲಿ ಶೇ 2 ರಿಂದ ಶೇ 4ಕ್ಕೆ ಏರಿಸಲಾಗಿತ್ತು.
ಉಳಿದ ಚಿನ್ನದ ಮೇಲಿನ ತೆರಿಗೆ ಕೂಡಾ ಶೇ 5 ರಿಂದ ಶೇ 10ಕ್ಕೆ ಏರಿಕೆ ಆಗಿದೆ. ಬ್ರ್ಯಾಂಡೆಡ್ ಅಭರಣಗಳಂತೆ ಎಲ್ಲಾ ಚಿನ್ನದ ಉತ್ಪನ್ನಗಳ ಮೇಲೆ ಶೇ.1 ರಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ಕೂಡಾ ಪಾವತಿಸಬೇಕಾಗಿದೆ.












Click it and Unblock the Notifications