ಹೂ ಹಣ್ಣು ಅಂಗಡಿಗಾಗಿ ರವಿ ಬೆಳಗೆರೆ ಸತ್ಯಾಗ್ರಹ

Ravi Belagare speaking to the media
ಬೆಂಗಳೂರು, ಜ.25: ಗಾಂಧಿ ಬಜಾರಿನ ಹೂ, ಹಣ್ಣು ತರಕಾರಿ ಅಂಗಡಿಗಳ ಧ್ವಂಸವನ್ನು ಖಂಡಿಸಿ ಪತ್ರಕರ್ತ ರವಿ ಬೆಳೆಗೆರೆ ಅವರು ಬುಧವಾರ (ಜ.25) ಸತ್ಯಾಗ್ರಹ ಆರಂಭಿಸಿದ್ದಾರೆ. ರವಿ ಬೆಳಗೆರೆ ಅವರ ಪುಸ್ತಕದಂಗಡಿ 'ಬೆಳೆಗೆರೆ ಬುಕ್ಸ್ ಅಂಡ್ ಕಾಫಿ' ಹೂ ಹಣ್ಣಿನ ಬೀದಿಯಲ್ಲಿ ಫೆ.5 ರ ಸಂಜೆ 4.30 ಗೆ ಆರಂಭವಾಗಲಿದೆ.

ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿಕೊಂಡಿರುವ ಗಾಂಧಿಬಜಾರು, ಬಸವನಗುಡಿ, ಮಲ್ಲೇಶ್ವರ, ಜಯನಗರ ಭಾಗಗಳಲ್ಲಿ ಈ ರೀತಿ ಅಮಾನುಷ ಕ್ರಮ ಜರುಗಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ.

ಬಿಬಿಎಂಪಿ ಆತುರ ಕ್ರಮ ಕೈಗೊಳ್ಳುವ ಮೊದಲು ಮಾನವೀಯತೆ ದೃಷ್ಟಿಯಿಂದ ಒಮ್ಮೆ ನೋಡಬಹುದಿತ್ತು. ಇಲ್ಲಿರುವ ನನ್ನ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ನೋವಿಗೆ ನಾನು ಸ್ಪಂದಿಸಲೇ ಬೇಕಾಗಿದೆ ಅದಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ರವಿ ಬೆಳೆಗೆರೆ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿದರು.

ಹಲವಾರು ವರ್ಷಗಳಿಂದ ವ್ಯಾಪಾರ ದೃಷ್ಟಿಯಿಂದ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ಗಾಂಧಿಬಜಾರನ್ನು ಅಪ್ಪಿಕೊಂಡಿರುವ ವ್ಯಾಪಾರಿಗಳ ಕೂಗಿಗೆ ಸ್ಪಂದಿಸದೆ ಬಿಬಿಎಂಪಿ ಅವರು ಅಂಗಡಿ ಮುಂಗಟ್ಟುಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+