ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಧಿಕೃತ, 24.5 ಲಕ್ಷ ನಕಲಿ ಗ್ಯಾಸ್ ಕನೆಕ್ಷನ್ ಕಟ್

By Srinath
|
Google Oneindia Kannada News

24-point-5-lakh-bogus-lpg-connections-disconnected
ಬೆಂಗಳೂರು, ಜ.10: ಅಡುಗೆ ಅನಿಲ ಸಂಪರ್ಕಗಳನ್ನು ಅಸಲೀಯತ್ತು ಕಂಡುಹಿಡಿಯಲು ಆಹಾರ ಇಲಾಖೆಯು ಇತ್ತೀಚೆಗೆ ಅಂತರ್ಜಾಲದಲ್ಲಿ ಜಾಲಾಡಿದ್ದು ಜಗಜ್ಜಾಹೀರಾಗಿತ್ತು. ಈ ಸಂದರ್ಭದಲ್ಲಿ ಸರಕಾರ ಕೈಗೊಂಡ ಬಿಗಿ ಕ್ರಮದ ಫಲವಾಗಿ ರಾಜ್ಯಾದ್ಯಂತ ಒಟ್ಟು 24.53 ಲಕ್ಷ ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಹಚ್ಚಿ, ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯಾದ್ಯಂತ ಒಟ್ಟು 78, 89,733 ಅಡುಗೆ ಅನಿಲ ಸಂಪರ್ಕಗಳಿವೆ. ಇದರಲ್ಲಿ 24.53 ಲಕ್ಷ ನಕಲಿ LPG ಕನೆಕ್ಷನ್. ಇವೆರಡರಲ್ಲಿ ನೀವು ಯಾವ ಮಾನದಂಡಕ್ಕೆ ಒಳಪಡುತ್ತೀರಿ ಎಂಬುದನ್ನು ತಕ್ಷಣ ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ಕೇಳಿ ತಿಳಿದುಕೊಳ್ಳಿ. ಇಲ್ಲವಾದಲ್ಲಿ ನಕಲಿಯಾಗಿದ್ದರೆ ನಿಮ್ಮ ಕನೆಕ್ಷನ್ ಕಟ್ ಆಗುವುದನ್ನು ಯಾರೂ ತಪ್ಪಿಸಲಾರರು.

ಈ ಅವಾಂತರಕ್ಕೆ ಇಲಾಖೆಯು ಗ್ಯಾಸ್ ಏಜೆನ್ಸಿಗಳನ್ನು ಹೊಣೆಯಾಗಿಸಿದೆ. ಕೇಂದ್ರ ಸರಕಾರ ಸಬ್ಸಿಡಿ ದರದಲ್ಲಿ ಕೊಡಮಾಡುವ LPGಯನ್ನು ಗ್ಯಾಸ್ ಏಜೆನ್ಸಿಗಳು ಗೃಹೋಪಯೋಗಿ ಬಳಕೆಗೆ ವಿತರಿಸದೆ ವಾಣಿಜ್ಯ ಬಳಕೆಗೆ ಮಾರಾಟ ಮಾಡಿಕೊಳ್ಳುವ ಉದ್ದೇಶದಿಂದ ಅನೇಕ ಸಂಪರ್ಕಗಳನ್ನು ಕಲ್ಪಿಸಿವೆ ಎಂದು ಇಲಾಖೆ ಮೂಲಗಳು ಹೇಳಿವೆ.

ಇಂತಹ ಸಂಪರ್ಕಗಳ ವಿದ್ಯುತ್ ಸಂಪರ್ಕದ RR ಸಂಖ್ಯೆಯನ್ನು ಪರಿಶೀಲಿಸಲಾಗಿ, ಇವೆಲ್ಲ ವಾಣಿಜ್ಯಿಕ ಸಂಪಕರ್ಕಗಳನ್ನು ಹೊಂದಿಲ್ಲದಿರುವುದು ಪತ್ತೆಯಾಗಿದೆ. ಇದರಿಂದ ಅಂತಹುವುಗಳನ್ನು ನಕಲಿ ಎಂದು ಘೋಷಿಸಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಅಂತಹ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

English summary
The Karnataka government has traced 24.53 lakh illegal LPG connections in the state in a recent online verification campaign. The department of food and civil supplies has begun crackdown and disconnection drive. This action is initiated by the Chief Minister ( BJP) Sadananda Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X