ತುಪ್ಪಾ ಬೇಕಾ ತುಪ್ಪಾ ಕಲಬೆರಕೆ ತುಪ್ಪಾ

ಅರೋಪಿ ದೀಪಾಂಜಲಿ ನಗರದ ಮಹೇಶ್ (27) ತುಂಬಾ ಚಾಣಕ್ಷತನದಿಂದ ಖಾದ್ಯ ತೈಲಗಳನ್ನು ಕಲಬೆರಕೆ ಮಾಡುತ್ತಿದ್ದ.
ಸುಮಾರು 2 ಲಕ್ಷ ರೂ ಬೆಲೆಯ 1000 ಲೀಟರ್ ಕಲಬೆರಕೆ ತುಪ್ಪ, ಹಾಗೂ ಅದಕ್ಕೆ ಬೇಕಾದ ಕಚ್ಚಾವಸ್ತುಗಳಾದ ಪಾಮೋಲಿನ್ ಎಣ್ಣೆ, ವನಸ್ಪತಿ ಡಾಲ್ಡಾ, ರಂಗಮಲ್ಲಿಗೆ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ಯಾಸ್ ಸ್ಟವ್, ತೂಕದ ಯಂತ್ರ, ತಗಡಿನ ಟಿನ್ ಸೇರಿದಂತೆ ಇತರೆ ವಸ್ತುಗಳು ಈಗ ಪೊಲೀಸರ ವಶದಲ್ಲಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬೆರಕೆ ತೈಲಗಳನ್ನು ಯಾವ ಯಾವ ಹೋಟೆಲ್ ಗಳಿಗೆ ಸರಬರಾಜು ಮಾಡಿದ್ದ, ಈತನ ಗ್ರಾಹಕರು ಎಲ್ಲೆಲ್ಲಿ ಇದ್ದಾರೆ ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಇನ್ಸ್ ಪೆಕ್ಟರ್ ಕೆ ನಾಗರಾಜ್ ಹೇಳಿದ್ದಾರೆ.












Click it and Unblock the Notifications