ಸಚಿವ ಯೋಗೀಶ್ವರ್ ಬಂಧನಕ್ಕೆ ಕುಣಿಕೆ ಸಿದ್ಧ: ಮೊಯ್ಲಿ

ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೆಗಾಸಿಟಿ ಡೆವಲಪರ್ಸ್ ಕಂಪನಿಯ ಮಾಲೀಕ ಹಾಗೂ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮೊಯ್ಲಿ ತಿಳಿಸಿದ್ದಾರೆ.
ನಗರದ ಯವನಿಕ ಸಭಾಂಗಣದಲ್ಲಿ ಬೆಂಗಳೂರು ನಾರ್ಥ್ ಎಜುಕೇಷನ್ ಸೊಸೈಟಿ 'ರತ್ನಾಕರವರ್ಣಿ- ಪ್ರಸ್ತುತತೆ ಮತ್ತು ಇತಿವೃತ್ತ" ಕುರಿತ ವಿಚಾರ ಸಂಕಿರಣ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಬುಧವಾರ ಅವರು ಮಾತನಾಡಿದರು.
ಸಚಿವ ಯೋಗೀಶ್ವರ್ ತಮ್ಮ ಮೆಗಾಸಿಟಿ ಕಂಪನಿಯ ಮೂಲಕ ನಿವೇಶನ ಹಂಚಿಕೆಯಲ್ಲಿ ವಂಚಿಸಿರುವ ಕುರಿತು ಕಂಪನಿಯ ವ್ಯವಹಾರಗಳ ಇಲಾಖೆ ಈಗಾಗಲೇ ವರದಿ ನೀಡಿದೆ. ವರದಿಯಲ್ಲಿ ಗಂಭೀರ ಅಂಶಗಳು ಅಡಕವಾಗಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಸಚಿವ ಸ್ಥಾನದಲ್ಲಿ ಮುಂದುವರಿಯುವುದು, ಬಿಡುವುದು ಅವರಿಗೆ ಬಿಟ್ಟದ್ದು ಎಂದರು.











Click it and Unblock the Notifications