ಮಾಲಿನಿ ಸಾವಿಗೆ ಪ್ರೇರೇಪಿಸಿದ ನಲ್ಲನ ಮೇಲೆ ಕೇಸ್

Malini Murmu
ಬೆಂಗಳೂರು, ಸೆ. 22 : ಪ್ರಿಯತಮೆಯನ್ನು 'ಡಿಚ್' ಮಾಡಿದ್ದೇನೆಂದು ಫೇಸ್ ಬುಕ್ ನಲ್ಲಿ ಸಂದೇಶ ಹಾಕಿ ಭಗ್ನಪ್ರೇಮಿ ಮಾಲಿನಿ ಮುರ್ಮು ಆತ್ಮಹತ್ಯೆಗೆ ಕಾರಣನಾದ ಅಭಿಷೇಕ್ ಧನ್ ಮೇಲೆ ಪ್ರಿಯತಮೆಯನ್ನು ಆತ್ಮಹತ್ಯೆಗೆ ಪ್ರೇರೇಪಿದ ಆರೋಪವನ್ನು ಹೊರಿಸಿ ಕೇಸ್ ಬುಕ್ ಮಾಡಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಆರೋಪ ಸಾಬೀತಾದರೆ ಆತ 7 ವರ್ಷದವರೆಗೆ ಶಿಕ್ಷೆಗೆ ಗುರಿಯಾಗಲಿದ್ದಾನೆ. ತಲೆಮರೆಸಿಕೊಂಡಿರುವ ಅಭಿಷೇಕ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ನಡುವೆ, ಆತ ತನ್ನ ಫೇಸ್ ಬುಕ್ ಅಕೌಂಟನ್ನು ಡಿಲೀಟ್ ಮಾಡಿದ್ದಾನೆ.

ಅಭಿಷೇಕ್ ತನ್ನ ಫೇಸ್ ಬುಕ್ ನಲ್ಲಿ "ಇಂದು ತುಂಬಾ ಸಂತೋಷವಾಗುತ್ತಿದೆ. ನನ್ನ ಹೊಸ ಗೆಳತಿಯನ್ನು ಡಿಚ್ ಮಾಡಿದ್ದೇನೆ. ಹ್ಯಾಪಿ ಇಂಡಿಪೆಂಡೆನ್ಸ್ ಡೇ" ಎಂದು ಮೆಸೇಜ್ ಹಾಕಿದ್ದ. ಇದರಿಂದ ಮನನೊಂದು ಖಿನ್ನತೆಗೊಳಗಾದ ಮಾಲಿನಿ ಹಾಸ್ಟೆಲ್ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮಾಲಿನಿಯ ತಂದೆ ಬಿಶ್ವನಾಥ್ ಅವರು, "ಅಭಿಷೇಕ್ ಮಾಲಿನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದಲೇ ಮಗಳು ಸಾವಿಗೆ ಶರಣಾದಳು. ನಮಗೆ ನ್ಯಾಯ ಸಿಗಲೇಬೇಕು, ಆಗ ಮಾತ್ರ ಮಾಲಿನಿಯ ಆತ್ಮಕ್ಕೆ ಶಾಂತಿ ದೊರೆಯುತ್ತದೆ" ಎಂದು ದುಃಖತಪ್ತರಾಗಿ ಹೇಳಿದ್ದರು. ಮಾಲಿನಿಯ ತಂದೆ ನೀಡಿರುವ ದೂರಿನ ಆಧಾರದ ಮೇರೆಗೆ ಕೇಸ್ ಬುಕ್ ಮಾಡಲಾಗಿದೆ.

ಮಾಲಿನಿ ಎಂಬಿಎ ವಿದ್ಯಾರ್ಥಿನಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬೆಂಗಳೂರು (IIM-B) ಕೂಡ ಮಾಲಿನಿ ಕುಟುಂಬಕ್ಕೆ ತನ್ನ ಸಂತಾಪವನ್ನು ವ್ಯಕ್ತಪಡಿಸಿ ಹೇಳಿಕೆ ನೀಡಿದೆ. ಅತ್ಯಂತ ಪ್ರತಿಭಾವಂತಳಾಗಿದ್ದ ಮಾಲಿನಿ ಸಾವು ನಿಜಕ್ಕೂ ಆಘಾತ ತಂದಿದೆ ಎಂದು ಪ್ರೊ.ಪಂಕಜ್ ಚಂದ್ರ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+