ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಶಾಸಕ ಚಪ್ಪಲಿ ಎಸೆತ
ಜೈಪುರ,
ಆ.30: ರಾಜಸ್ಥಾನ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕಿಯೊಬ್ಬರು ಕಾಂಗ್ರೆಸ್ ಶಾಸಕರತ್ತ ಚಪ್ಪಲಿ ಎಸೆದ ಪ್ರಸಂಗ ಸೋಮವಾರ ನಡೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ಐತಿಹಾಸಿಕ ಕೀಳುಮಟ್ಟದ ಕದನಕ್ಕೆ ಮತ್ತೊಂದು ಪ್ರಸಂಗ ಸೇರ್ಪಡೆಯಾಗಿಬಿಟ್ಟಿದೆ. id="toptextpromo">ಚಪ್ಪಲಿ
ಎಸೆದ ಶಾಸಕ ಭವಾನಿ ಸಿಂಗ್ ರಾಜಾವತ್ ಅವರನ್ನು ಒಂದು ವರ್ಷ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್ ಶಾಸಕ ರಘು ಶರ್ಮಾ ವಿರುದ್ಧ ಬಿಜೆಪಿ ಸದಸ್ಯ ಪ್ರಮೀಳಾ ಕುಂದರಾ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ರಘು ಅವರು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದರಿಂದ
ಸಿಟ್ಟಿಗೆದ್ದ ಶಾಸಕ ಭವಾನಿ ಸಿಂಗ್ ಬಾವಿಗಿಳಿದು ರಘು ಅವರನ್ನು ನಿಂದಿಸುತ್ತಾ ಅವರತ್ತ ಚಪ್ಪಲಿ ಎಸೆದಿದ್ದಾರೆ. ಆದರೆ, ಹಾರಿ ಬಂದ ಚಪ್ಪಲಿ ರಘು ಅವರಿಗೆ ತಾಗದೆ ಖಾಲಿ ಕುರ್ಚಿ ಮೇಲೆ ಬಿದ್ದಿದೆ. ಇದರಿಂದ ಒಂದು ಕ್ಷಣ ಗಾಬರಿಗೊಂಡರು ಶಾಸಕ ರಘು ಕೂಡಾ ತಮ್ಮ ಶೂ ತೆಗೆದು ಭವಾನಿ ಸಿಂಗ್ ರತ್ತ ಎಸೆದರು. ಇದರಿಂದ ರಾಜಸ್ಥಾನ ಅಸೆಂಬ್ಲಿ ಅಕ್ಷರಶಃ ರಣರಂಗವಾಗಿ ಮಾರ್ಪಾಟಾಗಿಬಿಟ್ಟಿತು.











Click it and Unblock the Notifications