ರಾಜೀವ್ ಹಂತಕರಿಗೆ ಸೆ.9 ರಂದು ನೇಣು ಹಾಕಲ್ಲ!

ಮೂವರು ಆರೋಪಿಗಳ ಗಲ್ಲುಶಿಕ್ಷೆಗೆ ಎಂಟು ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆ ವಿಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ವೆಲ್ಲೂರು ಜೈಲಿನಲ್ಲಿರುವ ಹಂತಕರಾದ ಮುರುಗನ್, ಸಾಂತನ್ ಮತ್ತು ಪೆರರಿವಾಳನ್ ಅವರಿಗೆ ಸೆ.9 ರಂದು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ಕೇಂದ್ರ ಸರ್ಕಾರದಿಂದ ಆದೇಶ ಹೊರಬಂದಿತ್ತು. ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಅಪರಾಧಿ ತ್ರಯರ ಕ್ಷಮಾದಾನದ ಮನವಿಯನ್ನು ತಿರಸ್ಕರಿಸಿದ್ದರು.
ಆದರೆ, ತಮಿಳುನಾಡು ಅಸೆಂಬ್ಲಿಯಲ್ಲಿ ಕೇಂದ್ರದ ಆದೇಶಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗಿದ್ದು, ಮೂವರು ಆರೋಪಿಗಳಿಗೆ ಕ್ಷಮಾದಾನ ನೀಡಬೇಕು. ಗಲ್ಲುಶಿಕ್ಷೆ ವಿಧಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ.












Click it and Unblock the Notifications