ಹೈಕೋರ್ಟಿನಲ್ಲಿ ಮಾಜಿ ಸಿಎಂ ಎಚ್ಡಿಕೆ ಪ್ರಕರಣ ವಿಚಾರಣೆ

ಸೋಮವಾರ ಸುಮಾರು ಒಂದು ತಾಸಿನ ವಿಚಾರಣೆ ನಂತರ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ (ಆ. 30) ಮುಂದೂಡಲಾಗಿತ್ತು. ಎರಡು ಪ್ರಕರಣಗಳನ್ನು ರದ್ದುಗೊಳಿಸಬೇಕೆಂದು ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸರಿಯಾಗಿ 10.30ಕ್ಕೆ ಆರಂಭವಾಗಬೇಕಿದ್ದ ವಿಚಾರಣೆ ಹತ್ತು ನಿಮಿಷ ತಡವಾಗಿ ಆರಂಭವಾಗಿದೆ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಪರವಾಗಿ ಅಜ್ಮತ್ ಪಾಶ ವಾದ ಮಂಡಿಸುತ್ತಿದ್ದಾರೆ.
ನ್ಯಾಯಮೂರ್ತಿ ಕೆಎನ್ ಕೇಶವ ನಾರಾಯಣ ಅವರು ವಿಚಾರಣೆ ಬಳಿಕ ಇಂದೇ ಮಧ್ಯಂತರ ಆದೇಶ ನೀಡುವ ಸಾಧ್ಯತೆಯಿದೆ. ಅಥವಾ ಹೆಚ್ಚಿನ ವಿಚಾರಣೆ ಅಗತ್ಯವಿದ್ದಲ್ಲಿ ಪ್ರಕರಣವನ್ನು ಮುಂದೂಡುವ ಸಾಧ್ಯತೆಯಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 8 ರಂದು ಲೋಕಾಯುಕ್ತ ವಿಶೇಷ ನ್ಯಾಯಲಯದಿಂದ ಎಚ್ಡಿಕೆ ದಂಪತಿಗೆ ಸಮನ್ಸ್ ಜಾರಿಯಾಗಿದೆ. ಇಂದು ಮಧ್ಯಾಹ್ನ ಲೋಕಾಯುಕ್ತ ಕೋರ್ಟ್ ಗೆ ಕುಮಾರಸ್ವಾಮಿ ಅವರು ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಸಮೇತ ಆ.30 ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ.












Click it and Unblock the Notifications