ಸ್ವಾಮಿ ಅಗ್ನಿವೇಶ್ ಬಂಧನಕ್ಕೆ ವಾರಂಟ್ ಜಾರಿ

ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಉಂಟು ಮಾಡಿದ ಆರೋಪವನ್ನು ಸ್ವಾಮಿ ಅಗ್ನಿವೇಶ್ ಮೇಲೆ ಹೊರೆಸಲಾಗಿದೆ. ಅಮರನಾಥ್ ಯಾತ್ರೆ ಡೋಂಗಿಗಳ ಯಾತ್ರೆ, ಬಡವರು, ಶ್ರೀಮಂತರಿಗೆ ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಎಂದು ಅಗ್ನಿವೇಶ್ ಜರೆದಿದ್ದರು.
ಈ ಸಂಬಂಧ ಅಗ್ನಿವೇಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 295 ಹಾಗೂ 295 'ಎ' ಪ್ರಕಾರ ಪ್ರಕರಣ ದಾಖಲಾಗಿತ್ತು.
ಪ್ರಕರಣ ವಿಚಾರಣೆ ನಡೆಸಿದ ಹನ್ಸಿ ಕೋರ್ಟ್ ಅಗ್ನಿವೇಶ್ ಅವರನ್ನು ಬಂಧಿಸಿ ಸೆ.19ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸೂಚಿಸಿದೆ.
ಅಣ್ಣಾ ತಂಡಕ್ಕೆ ಸ್ವಾಮಿದ್ರೋಹ ಬಗೆದ ವಿಡಿಯೋ ಕೂಡಾ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಗಾಗುತ್ತಿದ್ದು, ಸತ್ಯಾಸತ್ಯತೆ ಹೊರ ಬೀಳಬೇಕಿದೆ. ಅಗ್ನಿವೇಶ್ ತಮ್ಮ ಅಮಾಯಕತ್ವವನ್ನು ಸಾಬೀತು ಪಡಿಸಲಿ ಎಂದು ಕಿರಣ್ ಬೇಡಿ ಹೇಳಿದ್ದಾರೆ.












Click it and Unblock the Notifications