ಕರ್ನಾಟಕದಿಂದ 5,677 ಮಂದಿ ಹಜ್ ಯಾತ್ರೆಗೆ

ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ 2010-11 ನೇ ಸಾಲಿನಲ್ಲಿ ಹಜ್ ಯಾತ್ರೆಗೆ ರಾಜ್ಯಾದ್ಯಂತ 12,812 ಅರ್ಜಿಗಳು ಬಂದಿವೆ. ಕೇಂದ್ರದಿಂದ ರಾಜ್ಯಕ್ಕೆ ನಿಗದಿಗೊಳಿಸಲ್ಪಟ್ಟ ಕೋಟ 5,677. ಕುರ್ರಾ ಮುಖಾಂತರ ಆಯ್ಕೆಯಾಗಿರುವ ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 4,404. ನೇರ ಆಯ್ಕೆಯ ಮುಖಾಂತರ ಅವಕಾಶ ಪಡೆದ ಯಾತ್ರಾರ್ಥಿಗಳ ಸಂಖ್ಯೆ 1,273. ವೈಟಿಂಗ್ ಲಿಸ್ಟ್ ಮುಖಾಂತರ ಅವಕಾಶ ಪಡೆದ ಯಾತ್ರಾರ್ಥಿಗಳ ಸಂಖ್ಯೆ 272 ಎಂದು ಅವರು ತಿಳಿಸಿದರು.
ಮಂಗಳೂರು ಶಿಬಿರವು ಮಂಗಳೂರಿನ ಹಳೆ ವಿಮಾನ ನಿಲ್ದಾಣದ ಕಟ್ಟಡದಲ್ಲಿ ಸೆ.27ರಿಂದ ಆರಂಭವಾಗಲಿದೆ. ಯಾತ್ರೆಯ ಒಟ್ಟು ಅವಧಿ 41ರಿಂದ 45 ದಿನಗಳು. ಸೆ.29ರಿಂದ ಅ.3ರ ವರೆಗೆ ಸಂಜೆ 6ಕ್ಕೆ ಮಂಗಳೂರಿನಿಂದ ಮದೀನಕ್ಕೆ ವಿಮಾನ ಹೊರಡಲಿದೆ.
ಬೆಂಗಳೂರು ಶಿಬಿರವು ಬೆಂಗಳೂರಿನ ಖುದ್ದುಶ್ ಶಾ ಮೈದಾನದಲ್ಲಿ ಅ.16ರಂದು ಆರಂಭವಾಗಲಿದೆ. ಯಾತ್ರೆಯ ಒಟ್ಟು ಅವಧಿ 39ರಿಂದ 41 ದಿನಗಳು. ಅ.18ರಿಂದ ನ.1ರ ತನಕ ಬೆಂಗಳೂರಿನಿಂದ ಜೆಡ್ಡಾಕ್ಕೆ ವಿಮಾನ ಹಾರಾಟವಿರುತ್ತದೆ. ಬೆಂಗಳೂರು ಶಿಬಿರದ ಹಾಜಿಗಳ ಪುನರಾಗಮನವು ನ.20ರಿಂದ ಡಿ.9ರ ತನಕ ಎಂದು ಅವರು ವಿವರಿಸಿದರು.
ಸೆ.29ರಂದು ಮಂಗಳೂರು ಶಿಬಿರದ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಆಹ್ವಾನಿಸಲಾಗುವುದು. ಯಾತ್ರಿಗಳ ಸೇವಾ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಹಜ್ ಕಮಿಟಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸುಮಾರು 20ರಷ್ಟು ಖಾದಿಮುಲ್ ಹುಜ್ಜಾಜ್‌ಗಳು ಯಾತ್ರಾ ಸಂದರ್ಭದಲ್ಲಿ ಮೆಕ್ಕಾ ಹಾಗೂ ಮದೀನದಲ್ಲಿ ನಿಯುಕ್ತಿಗೊಂಡಿದ್ದಾರೆ ಎಂದರು.












Click it and Unblock the Notifications