ಬೆಂಗಳೂರಿನಲ್ಲಿ ಅಣ್ಣಾ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ
ಬೆಂಗಳೂರು,
ಮೇ.28: ನಗರದಲ್ಲಿ ಶನಿವಾರ (ಮೇ.28) ನಡೆಯುತ್ತಿರುವ ಅಣ್ಣಾ ಹಜಾರೆ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಜನ ಬೆಂಬಲ ವ್ಯಕ್ತವಾಗಿಲ್ಲ. ವಾರಾಂತ್ಯ ಎಂಬ ಕಾರಣಕ್ಕ್ಕೋ ಏನೋ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಣ್ಣಾ ಭಾಷಣ ಕೇಳಲು ದೂರದ ನವಲಗುಂದ, ಮಂಗಳೂರು, ಮೈಸೂರಿನಿಂದಲೂ ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದಿಳಿದಿದ್ದಾರೆ. id="toptextpromo">ಮೈದಾನದಲ್ಲಿ
ಸಭಿಕರಿಗಿಂತಲೂ ಹೆಚ್ಚಾಗಿ ಕಾರ್ಯಕರ್ತರು ಓಡಾಡುತ್ತಿರುವುದು ಹೆಚ್ಚಾಗಿತ್ತು. ಅಲ್ಲಲ್ಲಿ ದಣಿವಾರಿಸಿಕೊಳ್ಳಲು ಮಜ್ಜಿಗೆ, ಪಾನಕಗಳನ್ನು ನೀಡಲಾಗುತ್ತಿತ್ತು. ಭ್ರಷ್ಟಾಚಾರದ ವಿರುದ್ಧ ಸ್ಲೋಗನ್‌ಗಳನ್ನು ಹೊತ್ತ ಟೀ ಶರ್ಟ್‌ಗಳ ಮಾರಾಟವೂ ಜೋರಾಗಿತ್ತು. id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರದ
ವಿರುದ್ಧ ಸ್ಲೋಗನ್‌ಗಳು ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿಯಲ್ಲಿದ್ದದ್ದು ವಿಶೇಷ. ಒಟ್ಟಿನಲ್ಲಿ ಭಾಷೆ ಯಾವುದಾದರೇನು ಭಾವ ಮುಖ್ಯವಲ್ಲವೆ!? ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎನ್ನಿಸಿಕೊಂಡಿರುವ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನಿಜಕ್ಕೂ ವಿಷಾದನೀಯ. (ದಟ್ಸ್‌ಕನ್ನಡ ಪ್ರತಿನಿಧಿಯಿಂದ)











Click it and Unblock the Notifications