ಕ್ರೈಸ್ತ ಧರ್ಮ ಹುಟ್ಟಿದ್ದು ಭಾರತದಲ್ಲಿ : ಕೆ ಸುದರ್ಶನ್
ಮುಂಡ್ಲಾ,
ಫೆ.13: "ಕ್ರೈಸ್ತ ಧರ್ಮ ಹುಟ್ಟಿದ್ದು ಭಾರತದಲ್ಲಿ. ಬೌದ್ಧ ಧರ್ಮದ ಮುಂದುವರಿದ ಭಾಗವೇ ಕ್ರೈಸ್ತ ಧರ್ಮ. ಯೇಸು ಕ್ರಿಸ್ತ ತಮ್ಮ 13ನೇ ವಯಸ್ಸಿನಿಂದ 30ನೇ ವಯಸ್ಸಿನವರೆಗೂ ಭಾರತದಲ್ಲಿದ್ದರು." ಹಾಗಂತ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ ಆರ್ ಎಸ್ ಎಸ್‍ನ ಮಾಜಿ ಮುಖ್ಯಸ್ಥ ಕೆ ಎಸ್ ಸುದರ್ಶನ್. id="toptextpromo">ಮಧ್ಯ
ಪ್ರದೇಶದ ಮಂಡ್ಲದಲ್ಲಿ ಆಯೋಜಿಸಿದ್ದ 'ಮಾ ನರ್ಮದಾ ಸಾಮಾಜಿಕ್ ಕುಂಭ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯೇಸು ಕ್ರಿಸ್ತ ಬೌದ್ಧ ಧರ್ಮದಿಂದ ಪ್ರಭಾವಿತರಾಗಿದ್ದರು. ಇಸ್ರೇಲ್‍ಗೆ ತೆರಳಿದ ಬಳಿಕ ಅವರು ಇದೇ ತತ್ವಗಳನ್ನು ಭೋದಿಸಿದ್ದರು ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಸ್ರೇಲ್‌ನ
ರಾಜನಿಗೆ ಯೇಸು ಕ್ರಿಸ್ತನ ತತ್ವಗಳು ಹಿಡಿಸಲಿಲ್ಲ. ಹಾಗಾಗಿ ಅವನು ಕ್ರಾಸ್‌ಗೆ ಮೊಳೆ ಹೊಡೆಸಿದನು. ಯೇಸುಕ್ರಿಸ್ತನ ಶಿಷ್ಯರು ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿದರು. ಕ್ರಾಸ್‌ಗೆ ಮೊಳೆ ಹೊಡೆಸಿಕೊಂಡವರಲ್ಲಿ ಯಾರೂ ಸಾಯಲಿಲ್ಲ ಎಂದು ಸುದರ್ಶನ್ ಹೇಳಿದರು. ಅವರ ಈ ವಾದಕ್ಕೆ 'ಲಾಸ್ಟ್ ಇಯರ್ ಆಫ್ ಜೀಸಸ್ ಅಂಡ್ ಲಾಸ್ ಟೀಚಿಂಗ್ಸ್ ಆಫ್ ಜೀಸಸ್' ಕೃತಿ ಕಾರಣವಾಗಿದೆ.











Click it and Unblock the Notifications