Get Updates
Get notified of breaking news, exclusive insights, and must-see stories!

ದೇಶಿ ವಿಮಾನಯಾನ ದರ ಶೇ.25 ಇಳಿಕೆ

DGCA acts: Airfares slashed by 20-25 percent
ನವದೆಹಲಿ, ಡಿ.6: ದೇಶೀಯ ವಿಮಾನಯಾನ ಸಂಸ್ಥೆಗಳು ವಿವಿಧ ವಲಯಗಳಲ್ಲಿ ಒಟ್ಟಾರೆ ವಿಮಾನ ಪ್ರಯಾಣ ದರವನ್ನು ಕಡಿತಗೊಳಿಸಿದ್ದಾರೆ. ಒಟ್ಟಾರೆ ಡಿಜಿಸಿಎ ಒತ್ತಡಕ್ಕೆ ಮಣಿದು 20-25ರಷ್ಟು ಇಳಿಕೆ ಕಂಡಿದೆ. ಇದರಿಂದ ವಿಮಾನ ಪ್ರಯಾಣ ದರ ರು. 5ಸಾವಿರದಿಂದ ರು.20 ಸಾವಿರದಷ್ಟು ಇಳಿಕೆಯಾಗಿದೆ.

ಕಳೆದ ಎರಡು ವಾರಗಳ ಅವಧಿಯಲ್ಲಿ ಡಿಜಿಸಿಎ ಮುಖ್ಯಸ್ಥ ಇ.ಕೆ ಭರತ್ ಭೂಷಣ್ ಹಾಗೂ ಹಿಂದಿನ ಮುಖ್ಯಸ್ಥ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಎಸ್‌ಎಸನ್‌ಎ ಜೈದಿ ಅವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಲವು ಬಾರಿ ವಿಮಾನ ಪ್ರಯಾಣ ದರ ಕುರಿತಂತೆ ಚರ್ಚೆ ನಡೆಸಿದ್ದರು.

ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಗಳು ವಿಮಾನಯಾನ ಸಂಸ್ಥೆಗಳು ಏರಿಸಿದ್ದ ಮಿತಿಮೀರಿದ ಪ್ರಯಾಣದರದ ವಿರುದ್ಧ ಹಾಕಿದ ಒತ್ತಡ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ-ಮುಂಬೈ ವಲಯದ ವಿಮಾನಗಳ ಸಾಮಾನ್ಯ ಶ್ರೇಣಿ ಟಿಕೆಟ್ ದರವು ರೂ 5,000ದಿಂದ ರೂ 20,000 ನಡುವೆ ಇದೆ. ದೆಹಲಿ-ಚೆನ್ನೈ ಮತ್ತು ದೆಹಲಿ-ಕೋಲ್ಕತ್ತ ವಲಯಗಳ ದರ ರೂ 5,000ದಿಂದ 15,000ದವರೆಗೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ದರ (ಅಂದಾಜಿನಂತೆ)

* ದೆಹಲಿ-ಹೈದರಾಬಾದ್ ನಡುವೆ ರು 5,000 ರಿಂದ 13,000
* ಮುಂಬೈ-ತಿರುವನಂತಪುರ ನಡುವೆ ರು. 4,500 ರಿಂದ 14,000
* ದೆಹಲಿ-ಚೆನ್ನೈ ನಡುವೆ ರು. 5,000 ರಿಂದ 15,000
* ಮುಂಬೈ-ಬೆಂಗಳೂರು ನಡುವೆ ರು. 3,500 ರಿಂದ 7,000
* ದೆಹಲಿ-ಮುಂಬೈ ನಡುವೆ ರು. 5,000 ರಿಂದ 10,000

ಒನ್ ಇಂಡಿಯಾ ಮೂಲಕ ಕಡಿಮೆ ದರದಲ್ಲಿ ಟಿಕೆಟ್ ಖರೀದಿಸಿ!

ಎರಡು ವಾರಗಳ ಹಿಂದೆ ದೆಹಲಿ-ಮುಂಬೈ ನಡುವಿನ ವಿಮಾನದ ಅಂತಿಮ ಕ್ಷಣದ ಟಿಕೆಟ್ ಬೆಲೆ ರೂ 17,000 ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ದೆಹಲಿ- ಮುಂಬೈ ವಿಮಾನಗಳ ಕನಿಷ್ಠ ಟಿಕೆಟ್ ದರ ರೂ 3,000 ಹಾಗೂ ದೆಹಲಿ-ಚೆನ್ನೈ ಮತ್ತು ದೆಹಲಿ-ಕೋಲ್ಕತ್ತ ವಲಯಗಳ ಕನಿಷ್ಠ ಟಿಕೆಟ್ ದರ ರೂ 4,000 ಇತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+