ವಿಧಾನಸಭೆ ವಿಸರ್ಜನೆಗೆ ಆರೆಸ್ಸೆಸ್ ಗ್ರೀನ್ ಸಿಗ್ನಲ್

ಪ್ರತಿಪಕ್ಷಗಳು ಪ್ರತಿದಿನ ಬಿಚ್ಚಿಡುತ್ತಿರುವ ಹಗರಣಗಳು, ಶಾಸಕರ ಅಶಿಸ್ತಿನ ವರ್ತನೆ, ನಾಯಕತ್ವಕ್ಕೆ ಬ್ಲಾಕ್ ಮೇಲ್ ಮಾಡಿ ಬೇಡಿಕೆ ಈಡೇರಿಸಿಕೊಳ್ಳುವ ಶಾಸಕರ ಅಶಿಸ್ತಿನ ಪ್ರವೃತ್ತಿಯಿಂದ ಆರೆಸ್ಸೆಸ್ ಮುಖ್ಯಸ್ಥರು ರೋಸಿಹೋಗಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅರಳಿದ ಕಮಲ ಸರಕಾರ ಹಳಿ ತಪ್ಪುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿಯೇ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಶಾಸಕರ ಆಂತರಿಕ ಮೌಲ್ಯಮಾಪನ, ಪಕ್ಷದ ಸಂಘಟನಾ ಬಲವನ್ನು ಅಂದಾಜು ಮಾಡುವ ಕಾರ್ಯಕ್ಕೆ ಕೈಹಾಕಿದ್ದಾರೆ.












Click it and Unblock the Notifications