ಶೂನ್ಯ ಮಾಸಕ್ಕೂ ಮುನ್ನ ಸಚಿವ ಸಂಪುಟಕ್ಕೆ ಸರ್ಜರಿ
ಬೆಂಗಳೂರು,
ಸೆ.18: ಬಿಜೆಪಿ ಸರಕಾರದ ಸಚಿವ ಸಂಪುಟಕ್ಕೆ ಸೆ.22ರಂದು ಮೇಜರ್ ಸರ್ಜರಿ ನಡೆಯುವುದು ಬಹುತೇಕ ಖಚಿತವಾಗಿದೆ. ಶನಿವಾರ(ಸೆ.18) ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದ್ದು ಸಚಿವ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. id="toptextpromo">ಸಚಿವ
ಸಂಪುಟದ ನಾಲ್ಕೈದು ಸಚಿವರ ತಲೆದಂಡಕ್ಕೆ ವೇದಿಕೆ ಸಿದ್ಧವಾಗಿದೆ. ಸಚಿವರಾದ ಎಸ್ ಎ ರವೀಂದ್ರನಾಥ್, ಲಕ್ಷ್ಮಣ ಸವದಿ, ಡಿ.ಸುಧಾಕರ್, ಶಿವನಗೌಡ ನಾಯಕ್, ಆನಂದ್ ಆಸ್ನೋಟಿಕರ್ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಸಚಿವ ಸಂಪುಟಕ್ಕೆ ಹೊಸದಾಗಿ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಎ ನಾರಾಯಣ ಸ್ವಾಮಿ, ಸಿ ಟಿ ರವಿ, ವಿಜಯಶಂಕರ್, ಅಪ್ಪು ಪಟ್ಟಣ್ಣ ಶೆಟ್ಟಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. id='are-slot-1' class='oiad oi-axt oiadv'> id='top-searched-articles'>ಚೀನಾ
ಪ್ರವಾಸದಿಂದ ಮರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಸಂಘಪರಿವಾರದೊಂದಿಗೆ ಮಾತುಕತೆ ನಡೆಸಿದರು. ಸೆ.24ರ ನಂತರ ಶೂನ್ಯ ಮಾಸ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬೀಳಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೆ.24ರ ಒಳಗೆ ಸಚಿವ ಸಂಪುಟವನ್ನು ಪುನಾರಚಿಸಲು ಬಿಜೆಪಿ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications