ರಜೆ : ಸರಕಾರಿ ನೌಕರರಿಗೆ ಮಜವೋ ಮಜ

Long-holidays-during-ganesh-festival
ಬೆಂಗಳೂರು, ಸೆ. 5 : ಸರಕಾರಿ ಕಚೇರಿಗಳಿಗೆ ಈ ವಾರ ಬಹುತೇಕ ರಜಾ, ಎರಡು ದಿನ ರಜೆ ಹಾಕಿದರೆ ಇಡೀ ವಾರ ರಜೆ. ಸೆಪ್ಟೆಂಬರ್ 8 ಮತ್ತು 9 ರಂದು ರಜೆ ಹಾಕಿದರೆ ಒಟ್ಟು ಆರು ದಿನ ಸರಕಾರಿ ನೌಕರರಿಗೆ ರಜೆಯ ಮಜಾ.

ಸೆಪ್ಟೆಂಬರ್ 10 (ಶುಕ್ರವಾರ) - ರಂಜಾನ್
ಸೆಪ್ಟೆಂಬರ್ 11 (ಶನಿವಾರ) - ಗಣೇಶ ಚತುರ್ಥಿ
ಸೆಪ್ಟೆಂಬರ್ 12 (ಭಾನುವಾರ)

ಈ ಮಧ್ಯೆ ಸೆ. 7ರಂದು ಕೇಂದ್ರ ಸರಕಾರಿ ನೌಕರರು, ಬ್ಯಾಂಕ್ ಮತ್ತು ಎಲ್ಐಸಿ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳಿಗಾಗಿ ಮುಷ್ಕರಕ್ಕೆ ಕರೆ ನೀಡಿವೆ. ಇದಕ್ಕೆ ರಾಜ್ಯ ಸರಕಾರಿ ನೌಕರರ ಒಕ್ಕೂಟ ಕೂಡ ತಮ್ಮ ಬೆಂಬಲ ನೀಡಿದೆ. ಹಬ್ಬ ಮತ್ತು ಸಾಲು ಸಾಲು ರಜೆಗಳು ಇರುವುದರಿಂದ ಬಸ್ ಮತ್ತು ರೈಲಿನಲ್ಲಿ ಒತ್ತಡ ಇರುವುದು ನಿಶ್ಚಿತ. ಮುಂಗಡ ಬುಕಿಂಗ್ ಮಾಡಿಸಿಲ್ಲವಾದರೆ ತಮ್ಮ ಟಿಕೆಟ್ ಕಾದಿರಿಸಿಬಿಡಿ.

ಸೆ. 7 ರಂದು ಆಟೋ ಮುಷ್ಕರ : ಆಟೋ ಚಾಲಕರಿಗೆ ಚಾಲನಾ ಪತ್ರದ ಆಧಾರದ ಮೇಲೆ ಹಳದಿ ಪಡಿತರ ಕಾರ್ಡ್ ವಿತರಣೆ, ಪ್ರಾದೇಶಿಕ ಕಚೇರಿಗಳಲ್ಲಿ ಎಫ್ ಸಿ ಮಾಡಿಸಬಹುದಾದ ವ್ಯವಸ್ಥೆ, ಚಾಲಕರಿಗೆ ಬಿಡಿಎ ಅಥವಾ ಗೃಹಮಂಡಳಿಯಿಂದ ವಸತಿ ಸೌಲಭ್ಯ, ಡಿಜಿಟಲ್ ಮೀಟರ್ ಅಳವಡಿಸಲು ಎರಡು ಸಾವಿರ ರೂಪಾಯಿ ಪ್ರೋತ್ಸಾಹ ಧನ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಟೋರಿಕ್ಷಾ ಐಕ್ಯ ಹೋರಾಟ ಸಮಿತಿ ಸೆಪ್ಟಂಬರ್ 7ರಂದು ಮುಷ್ಕರ ನಡೆಸಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+