ಮಾದಿಗರೆಲ್ಲಾ ಮಾಧ್ವರಾಗಬೇಕು : ಪೇಜಾವರ ಶ್ರೀ

ನಗರದ ಕೈಲಾಸಪುರದ 2ನೇ ಮುಖ್ಯರಸ್ತೆಯಲ್ಲಿ ಸೋಮವಾರ ಮಾತನಾಡುತ್ತಿದ್ದ ಅವರು ಹಿಂದುಗಳಾಗಿರುವ ದಲಿತರನ್ನು ಅಸ್ಪೃಶ್ಯರು ಎಂದು ಹೇಳುವುದೇ ತಪ್ಪು. ಈಗಲೂ ಎಷ್ಟೋ ಊರುಗಳಲ್ಲಿ ದೇವಸ್ಥಾನಗಳಿಗೆ, ಹೋಟೆಲ್ ಗಳಿಗೆ ದಲಿತರ ಪ್ರವೇಶ ನಿರಾಕರಿಸಲಾಗುತ್ತದೆ. ಇವೆಲ್ಲಾ ತಪ್ಪಿದಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದರು.
ನಾನು ಇಲ್ಲಿಗೆ ಪ್ರಚಾರಕ್ಕಾಗಿ ಬಂದಿಲ್ಲ. ನಾನು ರಾಜಕಾರಣಿಯೂ ಅಲ್ಲ. ನನಗೆ ವೋಟೂ ಬೇಕಾಗಿಲ್ಲ. ಇದು ಹೃದಯಾಂತರಾಳದ ಆಸೆ. ಹಿಂದೂ ಜನರಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ಮುಖ್ಯ ಧ್ಯೇಯ ಎಂದು ಶ್ರೀಗಳು ಹೇಳಿದರು. ಹರಿಯಾಣಾದಲ್ಲಿ ಗೋವುಗಳನ್ನು ಕೊಂದ ಮೂವರು ದಲಿತರನ್ನು ಕೊಲೆ ಮಾಡಲಾಗಿತ್ತು. ಈ ವಿಷಯ ತಿಳಿದ ನಂತರ ಅಲ್ಲಿಗೆ ಭೇಟಿ ನೀಡಿ ದಲಿತರ ಕುಟುಂಬಗಳಿಗೆ ಸಾಂತ್ವನ ಹೇಳಿ ಈ ಭಾಗದ ಜನರಿಗೆ ಉಪದೇಶ ಮಾಡಿ ಬಂದಿದ್ದೇನೆ.
ಅಲ್ಲದೇ ಹರಿಯಾಣದಲ್ಲೇ ದಲಿತರ ಮನೆಯ ನಾಯಿ ಬೊಗಳಿತು ಎಂಬ ಕಾರಣಕ್ಕೆ ಅ ಮನೆಗೆ ಬೆಂಕಿ ಕುಟುಂಬದವರನ್ನು ಸಜೀವ ದಹನ ಮಾಡಲಾಗಿದೆ ಎಂಬ ವರದಿ ಓದಿದ್ದೇನೆ. ಅಲ್ಲಿಗೂ ಕೂಡಾ ಭೇಟಿ ಕೊಡಲಿದ್ದೇನೆ. ಮುಂದಿನ ವಿಎಚ್ ಪಿ ಸಂತರ ಸಮಾವೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಶ್ರೀಗಳು ಭರವಸೆ ನೀಡಿದರು.












Click it and Unblock the Notifications