ಖಾಸಗಿ ರಂಗದಲ್ಲೂ ಬಡವರಿಗೆ ಮೀಸಲಾತಿ ನೀಡಿ

ಈ ಕುರಿತು ಕೈಗಾರಿಕೆ ಇಲಾಖೆ ಉದ್ಯಮ ಸಂಸ್ಥೆಗಳಾದ ಫಿಕ್ಕಿ, ಸಿಐಐ ಮತ್ತು ಆಸೋಚಾಮ್ ಗಳಿಗೆ ಪತ್ರ ಬರೆದಿದೆ. ಕಳೆದ ಏಪ್ರಿಲ್ ನಲ್ಲಿ ಕೈಗಾರಿಕಾ ಸಂಸ್ಥೆಗಳು ಹಾಗೂ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆಯ ಕಾರ್ಯದರ್ಶಿ ಆರ್ ಪಿ ಸಿಂಗ್ ಅವರೊಂದಿಗೆ ಈ ಕುರಿತು ಸಭೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಕೈಗಾರಿಕೆಗಳಿಗೆ ರಫ್ತು ಆಧಾರಿತ ಸುಂಕ ಸಾಲ, ಕಂಪೆನಿಗಳಿಗೆ ಆದಾಯ ತೆರಿಗೆಯಲ್ಲಿ ಕಡಿತ ಮತ್ತು ವಿಶೇಷ ವಿತ್ತ ವಲಯದಲ್ಲಿ ಸ್ಥಾಪಿತವಾಗುವ ಕೈಗಾರಿಕೆ ಮತ್ತು ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಗಳ ಕೈಗಾರಿಕೆಗಳಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಸಹಾಯ ನೀಡುತ್ತಿದೆ.
ಪ್ರಧಾನ ಮಂತ್ರಿಗಳ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ಈ ಕುರಿತು ಕೈಗಾರಿಕೆಗಳೊಂದಿಗೆ ಚರ್ಚಿಸುತ್ತಿದೆ. ಕೈಗಾರಿಕಾ ಉದ್ಯಮಿಗಳ ಪ್ರಕಾರ ಕೈಗಾರಿಕೆಗಳು ಈಗಾಗಲೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉದ್ಯೋಗಾರ್ಥಿಗಳಿಗೆ ಉದ್ಯೋಗ ತರಬೇತಿ ಹಾಗೂ ನೇಮಕಾತಿಯಲ್ಲಿ ಆದ್ಯತೆ ನೀಡುತ್ತಿವೆ. ಸಿಐಐ ತನ್ನ ಸದಸ್ಯ ಕೈಗಾರಿಕೆಗಳಿಗೆ ಈ ಕುರಿತು ಯೋಚಿಸುವಂತೆ ಕೋರಿದೆ.












Click it and Unblock the Notifications