ಉರುಗ್ವೆಗೆ ಮೇಲೆ ಜಯ ಖಂಡಿತ: ಹಾಲೆಂಡ್

ಈಗಾಗಲೇ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೂ, ಸುಮಾರು 40 ವರ್ಷಗಳ ಉರುಗ್ವೆ ಉಪಾಂತ್ಯ ಹಂತ ತಲುಪಿದೆ.ಡಚ್ಚರು 12 ವರ್ಷದ ಬಳಿಕ ಸೆಮೀಸ್ ತಲುಪಿ ಚೊಚ್ಚಲ ಬಾರಿಗೆ ಕಪ್ ಎತ್ತುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. ಉರುಗ್ವೆ ಹಾಗೂ ನೆದರ್ಲಾಂಡ್ ಈ ಹಂತ ತಲುಪುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಉತ್ತಮ ಪ್ರದರ್ಶನದ ಮೂಲಕ ಎರಡೂ ತಂಡಗಳು ಪ್ರೇಕ್ಷಕರ ಮನಗೆದ್ದಿವೆ.
ಉರುಗ್ವೆ ಫಾರ್ವಡ್ ಶಕ್ತಿಯುತ: 1--4-4-2-ರಚನೆಯ ಮಾದರಿಯಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ಡಿಯಗೋ ಫೋರ್ಲಾನ್ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ. ಫರ್ನಾಡೆಂಜ್, ಕವನಿ ಸೂಕ್ತ ರೀತಿಯಲ್ಲಿ ಸಾಥ್ ನೀಡಿದರೆ, ಉರುಗ್ವೆಯನ್ನು ತಡೆಗಟ್ಟುವುದು ಅಸಾಧ್ಯ. ಆದರೆ, ಫೋರ್ಲಾನ್ ಮುಂಪಡೆಗೆ ಮಾತ್ರ ಮೀಸಲಾಗಿಸಿ , ಮಿಡ್ ಫೀಲ್ಡರ್ ಗಳಿಗೆ ಹೆಚ್ಚಿನ ಹೊಣೆ ಹೊತ್ತರೆ, ಡಚ್ಚರಿಗೆ ಚಳ್ಳೆಹಣ್ಣು ತಿನ್ನಿಸಬಹುದು.
ಉರುಗ್ವೆ ನ್ಯೂನತೆಗಳು: ಡಿಫೆಂಡರ್ ಫುಸಿಲ್ ಹಾಗೂ ಹ್ಯಾಂಡ್ ಆಫ್ ಗಾಡ್ ಖ್ಯಾತಿಯ ಮುಂಪಡೆ ಆಟಗಾರ ಸವಾರೇಜ್ ಇಬ್ಬರು ಈ ಪಂದ್ಯಕ್ಕೆ ಅಲಭ್ಯರಾಗಿದ್ದು, ಕೆಲ ಆಟಗಾರರು ಗಾಯಾಳುಗಳಾಗಿದ್ದಾರೆ. ಡಚ್ಚರ ಪ್ರಾಬಲ್ಯ ಮುರಿಯಬೇಕಾದರೆ ರಕ್ಷಣಾ ಪಡೆ ಇನ್ನಷ್ಟು ಬಲಗೊಳ್ಳಬೇಕು. ಡಿಯಾಗೋ ಲುಗಾನೊ, ವಿಕ್ಟೋರಿನೊ, ಸ್ಕೊಟಿ ಆದಷ್ಟು ರಕ್ಷಣಾ ವ್ಯೂಹದಲ್ಲೇ ಇದ್ದು ಸಂರಕ್ಷಿಸಿದರೆ ಒಳಿತು.
ದಕ್ಷಿಣ ಆಮೆರಿಕಾ ತಂಡವಾದರೂ ಬ್ರೆಜಿಲ್, ಅರ್ಜೆಂಟೀನಾಗಿಂತ ಭಿನ್ನವಾದ ಗೇಮ್ ಪ್ಲಾನ್ ನೊಂದಿಗೆ ಆಡುವ ಉರುಗ್ವೆ, ಯುರೋಪಿಯನ್ ಶೈಲಿಯ ಆಟವನ್ನು ಬದಿಗೊತ್ತಿ, ಆಕ್ರಮಣಕಾರಿ ಆಟಕ್ಕೆ ಇಳಿದರೆ ಡಚ್ಚರಿಗೆ ದೇವರೇ ಗತಿ!
ಹಾಲೆಂಡ್ ಪ್ರಾಬಲ್ಯ: ರೊಬೆಮ್, ಸ್ನೈಡರ್, ವಾನ್ ಪರ್ಸಿ ಉತ್ತಮ ಲಯದಲ್ಲಿರುವ ಕಾರಣ, 3 ಜನ ಫಾರ್ವಡ್ ಗಳೊಂದಿಗೆ 1-3-4-3 ರಚನೆಯೊಂದಿಗೆ ಕಣಕ್ಕಿಳಿದು ಉರುಗ್ವೆಯನ್ನು ಧ್ವಂಸ ಮಾಡಲು ಹವಣಿಸುತ್ತಿದೆ. ಮಿಡ್ ಫೀಲ್ಡರ್ ಸ್ನೈಡರ್ ಮುಂಪಡೆ ಸೇರಿ ಮುನ್ನಡೆಸಿದರೆ ಅಚ್ಚರಿಯೇನಿಲ್ಲ.
ಡಚ್ಚರ ನ್ಯೂನತೆಗಳು: ಜಾನ್ ಹೈಟಿಂಗ ನೇತೃತ್ವದ ರಕ್ಷಣಾ ಪಡೆ ಇದುವರೆವಿಗೂ ಭಾರಿ ತೊಂದರೆ ಅನುಭವಿಸಿಲ್ಲ. ಉರುಗ್ವೆ ಮುಂಪಡೆಯನ್ನು ಕಟ್ಟಿ ಹಾಕುವುದು ಸುಲಭದ ಮಾತಲ್ಲ. ಪದೇ ಪದೇ ದಾಳಿ ಮಾಡುವಲ್ಲಿ ಹಾಲೆಂಡ್ ವೈಫಲ್ಯವಾಗಿ ಅಟಗಾರರು ತಾಳ್ಮೆ ಕಳೆದುಕೊಳ್ಳುವುದು ಮಾಮೂಲಿ.
ಫಲಿತಾಂಶ: ಸಮಬಲದ ಹೋರಾಟದ ನಿರೀಕ್ಷೆಯಿದ್ದು, ದ್ವಿತೀಯಾರ್ಧದ ಅಂತಿಮ ಅವಧಿಯಲ್ಲಿ ಅಥವಾ ಹೆಚ್ಚುವರಿ ಅವಧಿಯಲ್ಲಿ ತಂಡ ಜಯಗಳಿಸುವ ಸಾಧ್ಯತೆಯಿದ್ದು, ಕಡಿಮೆ ಅಂತರದ ಜಯವನ್ನು ನಿರೀಕ್ಷಿಸಲಾಗಿದೆ. ಬುಕ್ಕಿಗಳಿಗೆ ಈಗ ಅರೆಂಜ್ ಬಣ್ಣ ಮಾತ್ರ ಕಾಣಿಸುತ್ತಿದೆ. 1-0 ಅಂತರದ ಜಯ ಹಾಲೆಂಡ್ ರನ್ನು ಫೈನಲ್ ಗೆ ಕೊಂಡೊಯ್ಯಲಿದೆ ಎನ್ನುತ್ತಾರೆ ಬೆಟ್ಟಿಂಗ್ ದೊರೆಗಳು.











Click it and Unblock the Notifications