ಮೆಡಿಕಲ್ ಸೀಟು, ಪಿಯು ಶುಲ್ಕ ಹೆಚ್ಚಳ

ಸರ್ಕಾರಿ ಕಾಲೇಜು, ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿದೆ. ಖಾಸಗಿ ಕಾಲೇಜುಗಳಲ್ಲಿನ ಮೂಲ ಸೌಲಭ್ಯಗಳನ್ನು ಭಾರತೀಯ ವೈದ್ಯಕೀಯ ಪರಿಷತ್ತಿನ ಪರಿಶೀಲನಾ ವರದಿ ಆಧರಿಸಿ ಖಾಸಗಿ ಕಾಲೇಜುಗಳಲ್ಲಿ ಸೀಟು ಹೆಚ್ಚಳ ಮಾಡಬಹುದಾಗಿದೆ ಎಂದರು.
ಸದ್ಯ ರಾಜ್ಯದ 10 ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಕಾಲೇಜುಗಳಿಂದ ಒಟ್ಟು 3805 ಸೀಟುಗಳು ಲಭ್ಯವಿದೆ. ಈ ಪೈಕಿ 172 ಸೀಟು ಕೇಂದ್ರ ಸರ್ಕಾರದ ಕೋಟಾ, 1822 ರಾಜ್ಯ ಸರ್ಕಾರಿ ಕೋಟಾ ಹಾಗೂ 1815 ಸೀಟು ಆಡಳಿತ ಮಂಡಳಿ ಕೋಟಾ ಎಂದು ಸಚಿವರು ವಿವರಿಸಿದರು.
ಬಂಡವಾಳ ಹೂಡಿಕೆ: ಬೆಂಗಳೂರಿನಲ್ಲಿ ಆಸ್ಪತ್ರೆ ಆರಂಭಿಸಲು ಮುಂದೆಬರುವವರಿಗೆ ದೇವನಹಳ್ಳಿ ಬಳಿ ಭೂಮಿ ನೀಡಲಾಗುವುದು ಎಂದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮೈಸೂರು, ಹುಬ್ಬಳ್ಳಿ ಹಾಗೂ ಗುಲ್ಬರ್ಗಾಗಳಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಗಳನ್ನು ತೆರೆಯಲಾಗುವುದು.
ಸದ್ಯದಲ್ಲೇ ಮೈಸೂರಿನಲ್ಲಿ 20 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆ ಆರಂಭವಾಗಲಿದೆ. ಜತೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಕಟ್ಟಡವನ್ನು ವಿಸ್ತರಣೆ ಮಾಡುವ ಮೂಲಕ 150 ಹಾಸಿಗೆಗಳಿಗೆ ಸಾಮರ್ಥ್ಯ ಹೆಚ್ಚಿಸಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರತಿಷ್ಠಾನ ಮುಂದೆ ಬಂದಿದೆ ಎಂದು ಸಚಿವ ರಾಮಚಂದ್ರಗೌಡ ತಿಳಿಸಿದರು.
ಪ್ರವೇಶ ಶುಲ್ಕ ವಿವರ:
ಎಂಬಿಬಿಎಸ್ :16,700ರು.
ದಂತ ವೈದ್ಯಕೀಯ : 14,400ರು.
ಸಿಇಟಿ ಮೂಲಕ ಖಾಸಗಿ ಕಾಲೇಜುಗಳಲ್ಲಿ
ಎಂಬಿಬಿಎಸ್ : 35 ಸಾವಿರ ರು.
ದಂತ ವೈದ್ಯಕೀಯ : 25 ಸಾವಿರ ರು.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಕೋಟಾ
ಎಂಬಿಬಿಎಸ್ : 3.25 ಲಕ್ಷ ರು.
ದಂತ ವೈದ್ಯಕೀಯ : 2.30 ಲಕ್ಷ ರು.
ಪಿಯು ಪ್ರವೇಶಶುಲ್ಕ ಹೆಚ್ಚಳ: ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಪಿಯು ಪ್ರವೇಶ ಶುಲ್ಕ ಹೆಚ್ಚಳ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎರಡೂ ವರ್ಷದ ಪರೀಕ್ಷಾ ಶುಲ್ಕದಲ್ಲೂ ಕೊಂಚ ಮಟ್ಟಿನ ಹೆಚ್ಚಳ ಮಾಡಲಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಶುಲ್ಕ ವಿವರ:
ಸರ್ಕಾರಿ ಕಾಲೇಜುಗಳಲ್ಲಿ: ಬೋಧನಾ ಶುಲ್ಕ 420 ರು.
ಖಾಸಗಿ ಕಾಲೇಜುಗಳಲ್ಲಿ ಬೋಧನಾ ಶುಲ್ಕ 840 ರು.
ದಾಖಲಾತಿ ಶುಲ್ಕ:21 ರು.
ವಿಶೇಷ ದಾಖಲಾತಿ ಶುಲ್ಕ 420 ರು.
ವಿಶೇಷ ವಿಳಂಬ ಶುಲ್ಕ 1,400 ರು.
ಕ್ರೀಡಾ ಶುಲ್ಕ 70 ರು.
ಪಠ್ಯೇತರ ಮತ್ತು ಸಾಂಸ್ಕೃತಿಕ ಶುಲ್ಕ 56 ರು.
ಗ್ರಂಥಾಲಯ ಶುಲ್ಕ 100 ರು.











Click it and Unblock the Notifications