ನರಮೇಧ : ಛತ್ತೀಸ್ ಗಢ್ ಬಂದ್ ಯಶಸ್ವಿ
ರಾಯ್
ಪುರ್, ಏ. 8 : ಕಳೆದ ಬುಧವಾರ ಮಾವೋವಾದಿಗಳು ಸಿಆರ್ ಪಿಎಫ್ ಯೋಧರ ಮೇಲೆ ನಡೆಸಿದ ಭೀಕರ ಮಾರಣಹೋಮವನ್ನು ಪ್ರತಿಭಟಿಸಿ ಪ್ರತಿಪಕ್ಷ ಕಾಂಗ್ರೆಸ್ ನೀಡಿರುವ ಬಂದ್ ಕರೆ ಸಂಪೂರ್ಣ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಬಂದ್ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. id="toptextpromo"> ರಸ್ತೆಗಳು ನಿರ್ಜನ ಪ್ರದೇಶಗಳಂತಾಗಿವೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಅಗತ್ಯ ವಸ್ತುಗಳಿಗಾಗಿ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಾಜಧಾನಿ ರಾಂಚಿ, ರಾಯ್ ಪುರ್, ಕೊಂಬ್ರಾ, ಬಿಲಾಸ್ ಪುರ್, ರಾಯಗಢ್, ಬಿಲ್ಲೈ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಂದ್ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. id='are-slot-1' class='oiad oi-axt oiadv'> id='top-searched-articles'> ಬಂದ್ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶ ಎನಿಸಿರುವ ನಕ್ಸಲ್ ಪೀಡಿತ ಪ್ರದೇಶಗಳಾದ ದಂತೇವಾಡ, ಬಿಜಾಪುರ್, ನಾರಾಯಣಪುರ್, ಬಸ್ತರ್ ಹಾಗೂ ಕಂಕೇರಾ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬುಧವಾರ ದಂತೇವಾಡ ಜಿಲ್ಲೆಯ ಮುಕ್ರಾನಾ ದಟ್ಟಾರಣ್ಯಾದಲ್ಲಿ ಏಕಕಾಲಕ್ಕೆ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದ ಮಾವೋವಾದಿಗಳು, 80 ಮಂದಿ ಯೋಧರನ್ನು ಅಮಾನುಷವಾಗಿ ಕೊಂದು ಹಾಕಿದ್ದರು.











Click it and Unblock the Notifications